ಮಾಸ್ತಿಗುಡಿ ದುರಂತದಲ್ಲಿ ಮೃತರಾದ ಅನಿಲ್ ಮತ್ತು ಉದಯ್ ಭರ್ಜರಿ ಚಿತ್ರದಲ್ಲೂ ನಟಿಸಿದ್ದಾರೆ. ಈ ಇಬ್ಬರಲ್ಲಿ ಉದಯ್, ಧ್ರುವ ಸರ್ಜಾಗೆ ಬಾಲ್ಯದ ಗೆಳೆಯ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಇಬ್ಬರೂ ಚಡ್ಡಿ ದೋಸ್ತುಗಳು. ಧ್ರುವ ಮನೆಯ ಮುಂದಿನ ರಸ್ತೆಯಲ್ಲೇ ಉದಯ್ ಮನೆಯಿತ್ತು. ಮಾಸ್ತಿಗುಡಿ ಚಿತ್ರೀಕರಣಕ್ಕೆ ಹೋಗುವ ಹಿಂದಿನ ದಿನ ಚಿತ್ರದ ಚಿತ್ರೀಕರಣ ಮುಗಿಸಿದ್ದರಂತೆ ಉದಯ್.
ಅವನಿಗೆ ತುಂಬಾ ಕನಸುಗಳಿದ್ದವು. ಅದಕ್ಕೆ ತಕ್ಕಂತೆ ಶ್ರಮವಹಿಸುತ್ತಿದ್ದ. ಶೂಟಿಂಗ್ ಕೊನೆಯ ದಿನ ತುಂಬಾನೇ ಮಾತನಾಡಿದ್ದೆವು. ದೀಪಾವಳಿಯ ದಿನ ಶೂಟಿಂಗ್ ಮುಗಿದಿತ್ತು. ಅದಾದ ನಂತರ ಮಾಸ್ತಿಗುಡಿ ಶೂಟಿಂಗ್ಗೆ ಹೋದ. ಬರಲೇ ಇಲ್ಲ. ಅವನೊಬ್ಬ ನನ್ನ ಜೊತೆಯಲ್ಲಿರಬೇಕಿತ್ತು ಎಂದು ಭಾವುಕರಾಗುತ್ತಾರೆ ಧ್ರುವ.