` ಸಿದ್ಧವಾಗುತ್ತಿದೆ ಕರ್ವ 2 - ಆಕಾಂಕ್ಷ ನಾಯಕಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
karva 2 ready to launch
Akanksha Image

ಕರ್ವ, ಕಳೆದ ವರ್ಷ ರಿಲೀಸ್ ಆಗಿದ್ದ ಥ್ರಿಲ್ಲರ್ ಸಿನಿಮಾ. ಹಾರರ್ ಸ್ಟೈಲ್​ನಲ್ಲಿ ಥ್ರಿಲ್ಲರ್ ಕಥೆ ಹೇಳಿದ್ದ ನವನೀತ್ ಕರ್ವದಲ್ಲಿ ಗೆದ್ದಿದ್ದರು. ಕರ್ವ ಎಂಡ್​ ಕಾರ್ಡ್​ನಲ್ಲಿಯೇ ಕರ್ವ 2 ಬರುವ ಸೂಚನೆ ಕೊಟ್ಟಿದ್ದರು. ಅದರಂತೆಯೇ ಈಗ ಕರ್ವ 2 ಗೆ ವೇದಿಕೆ ಸಿದ್ಧಪಡಿಸಿದ್ದಾರೆ ನವನೀತ್.

ಸದ್ಯಕ್ಕೆ ನವನೀತ್, ರವಿಚಂದ್ರನ್ ಅಭಿನಯದ ಬಕಾಸುರದಲ್ಲಿ ಬ್ಯುಸಿ. ಚಿತ್ರದ ಪೋಸ್ಟ್ ಪ್ರೊಡಕ್ಷನ್​ನಲ್ಲಿ ತೊಡಗಿಸಿಕೊಂಡಿರುವ ನವನೀತ್, ನಂತರ ಕರ್ವ 2 ಚಿತ್ರದ ಚಿತ್ರೀಕರಣ ಶುರು ಮಾಡಲಿದ್ದಾರೆ. ಚಿತ್ರದ ನಾಯಕಿಯಾಗಿ ಆಕಾಂಕ್ಷ ಆಯ್ಕೆಯಾಗಿದ್ದಾರೆ.

ಆರ್ ಎಕ್ಸ್ ಸೂರಿ, ಜಲ್ಸಾ ಚಿತ್ರಗಳಲ್ಲಿ ನಟಿಸಿದ್ದ ಆಕಾಂಕ್ಷಾಗೆ ಈ ಚಿತ್ರದಲ್ಲಿ ಕುರುಡಿಯ ಪಾತ್ರವಂತೆ. ಸವಾಲಿನ ಪಾತ್ರವನ್ನು ನಿಭಾಯಿಸುವ ವಿಶ್ವಾಸದಲ್ಲಿದ್ದಾರೆ ಆಕಾಂಕ್ಷ. ಉಳಿದಂತೆ ಕರ್ವ ತಂಡಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ಕರ್ವ 2 ನಲ್ಲೂ ಮುಂದುವರೆಯಲಿದೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery