ರಾಜಕೀಯಕ್ಕೂ ನನಗೂ ಆಗಿಬರಲ್ಲ. ನನ್ನದು ಸಲಾಮ್ ಹೊಡೆಯುವ ಪ್ರವೃತ್ತಿಯಲ್ಲ. ಹೀಗಾಗಿ ನಾನು ರಾಜಕೀಯಕ್ಕೆ ಬರೋ ಸುದ್ದಿ ದೂರದ ಮಾತು ಎಂದಿದ್ದಾರೆ ನಟ ದರ್ಶನ್. ದರ್ಶನ್ ರಾಜಕೀಯಕ್ಕೆ ಬರುತ್ತಾರೆ, ಕಾಂಗ್ರೆಸ್ ಸೇರುತ್ತಾರೆ, ಮೈಸೂರು-ಮಡಿಕೇರಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತಾರೆ ಎಂಬ ಸುದ್ದಿಗಳಿಗೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ ನಟ ದರ್ಶನ್.
ನಾನೊಬ್ಬ ನಟ. ನನಗೆ ರಾಜಕೀಯ ಗೊತ್ತಿಲ್ಲ. ಒಂದು ವೇಳೆ ರಾಜಕೀಯಕ್ಕೆ ಹೋಗುವುದೇ ಆದರೆ, ಗುಟ್ಟು ಗುಟ್ಟಾಗಿ ಹೋಗಲ್ಲ. ಎಲ್ಲರಿಗೂ ಹೇಳಿ ಬಹಿರಂಗವಾಗಿಯೇ ಹೋಗುತ್ತೇನೆ. ಆದರೆ, ನನ್ನ ವ್ಯಕ್ತಿತ್ವಕ್ಕೆ, ವರ್ತನೆಗೆ ರಾಜಕೀಯ ಸೂಟ್ ಆಗಲ್ಲ ಎಂದಿದ್ದಾರೆ ನಟ ದರ್ಶನ್.
ಖಾದಿ ತೊಟ್ಟ ಮೇಲೆ ಹೆಜ್ಜೆ ಹೆಜ್ಜೆಗೂ ಸಲಾಮು ಹೊಡೆಯಬೇಕು. ಸಲಾಮು ಹೊಡೆಯದಿದ್ದರೆ ರಾಜಕೀಯದಲ್ಲಿಬಾಳಿಕೆ ಬರಲ್ಲ. ಅದು ನನಗೆ ಗೊತ್ತು. ಅಂತಹ ವಾತಾವರಣದಲ್ಲಿ ನಾನು ಬೆಳೆದಿಲ್ಲ. ವೋಟು ಕೊಟ್ಟ ಜನ, ಆಮೇಲೆ ಬಾಯಿಗೆ ಬಂದಂತೆ ಮಾತನಾಡ್ತಾರೆ ಅದೆಲ್ಲ ನಮಗೆ ಯಾಕೆ ಬೇಕು ಹೇಳಿ ಎಂದಿದ್ದಾರೆ ದರ್ಶನ್. ತನ್ನನ್ನು ಸಿನಿಮಾ ಮಾಡಿಕೊಂಡು ಇರೋಕೆ ಬಿಡಿ ಎಂದು ಹೇಳಿದ್ದಾರೆ.
Related Articles :-