ಗದೆ ಬಿಟ್ಟರೆ, ಮೈಮೇಲೆ 35ರಿಂದ 40 ಕೆಜಿ ತೂಕದ ಒಡವೆಗಳಿರುತ್ತವೆ. ಡಿಸೈನ್ ಕಚ್ಚೆಯ ತೂಕವೇ ಎರಡ್ಮೂರು ಕೆಜಿ ಇರುತ್ತೆ. ಮೈಮೇಲಿನ ಒಡವೆ, ಕಿರೀಟ, ಗದೆ, ಐದಾರು ಇಂದು ಎತ್ತರದ ಗೋಲ್ಡ್ ಕಲರ್ ಚಪ್ಪಲಿ..ಇವೆಲ್ಲವನ್ನೂ ಹೊತ್ತುಕೊಂಡೇ ಓಡಾಡಬೇಕು. ಗದೆ, ಕಿರೀಟವನ್ನಷ್ಟೇ ಬದಿಗಿಡಬಹುದು ಹೊರತು, ಉಳಿದವೆಲ್ಲ ಮೈಮೇಲೆ ಇರುತ್ತವೆ. ಮೇಕಪ್ ಮಾಡಿಕೊಳ್ಳೋಕೆ ಎರಡೂವರೆ ಗಂಟೆ ಬೇಕು. ಮೇಕಪ್ ಹಾಕಿಕೊಂಡು ಕ್ಯಾರವಾನ್‍ನಿಂದ ಇಳಿದರೆ, ಸಂಜೆ 6ರ ತನಕ ಶೂಟಿಂಗ್. ಕಾಸ್ಟ್ಯೂಮ್ ತೆಗೆಯುವಂತೆಯೇ ಇಲ್ಲ. ಇದು ಸ್ವತಃ ದರ್ಶನ್ ಬಿಚ್ಚಿಟ್ಟಿರುವ ಕುರುಕ್ಷೇತ್ರದ ಶೂಟಿಂಗ್ ಅನುಭವ.
ಒಂದು ದಿನಕ್ಕೆ ಒಂದು ಅಥವಾ ಎರಡು ಸೀನ್‍ಗಳನ್ನಷ್ಟೇ ಶೂಟ್ ಮಾಡಲಾಗುತ್ತಿದೆಯಂತೆ. ಅದರಲ್ಲಿಯೂ ಎರಡು ಬಾರಿ. 2ಡಿ ವರ್ಷನ್‍ಗೆ ಒಂದ್ಸಾರಿ, 3ಡಿ ವರ್ಷನ್‍ಗೆ ಇನ್ನೊಂದ್ಸಾರಿ ಶೂಟಿಂಗ್ ನಡೆಯುತ್ತಿದೆಯಂತೆ. ಡಬ್ಬಿಂಗ್ ಕೂಡಾ ಎರಡೆರಡು ಸಲ ಮಾಡಬೇಕಾಗಿದೆ. ನಿರ್ಮಾಪಕ ಮುನಿರತ್ನ, ಒಂದೇ ಸಂಭಾವನೆಯಲ್ಲಿ ಎರಡು ಸಿನಿಮಾ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ ದರ್ಶನ್.
ಇನ್ನು ನಿರ್ದೇಶಕ ನಾಗಣ್ಣನವರಿಗೆ ಇನ್ನೂ ದರ್ಶನ್‍ಗೆ ಹೊಂದಬಲ್ಲ ನಾಯಕಿ ಸಿಕ್ಕಿಲ್ಲ. ಭಾನುಮತಿಯ ಪಾತ್ರಕ್ಕೆ ಹುಡುಕಾಟ ನಡೆಯುತ್ತಲೇ ಇದೆ.
ಇನ್ನು ದರ್ಶನ್ ಟೈಂ ಟೇಬಲ್ ಕೂಡಾ ಬದಲಾಗಿದೆ. ಬೆಳಗ್ಗೆ ಎದ್ದವರೇ ಎರಡು ಗಂಟೆ ಜಿಮ್‍ನಲ್ಲಿ ಬೆವರು ಹರಿಸಿ, ಜಾಗಿಂಗ್ ಮಾಡ್ತಾರೆ. ಆಮೇಲೆ ಸೆಟ್‍ಗೆ ಹೋದರೆ, ಎರಡು ಗಂಟೆ ಮೇಕಪ್‍ಗೇ ಸಮಯ ತೆಗೆದುಕೊಳ್ಳುತ್ತೆ. ಇದರ ನಡುವೆ ತಮ್ಮದೇ ಸೈಕಲ್‍ನಲ್ಲಿ ರಾಮೋಜಿಫಿಲ್ಮ್ ಸಿಟಿ ರೌಂಡ್ ಹಾಕ್ತಾರಂತೆ ದರ್ಶನ್. ಒಟ್ಟಿನಲ್ಲಿ ಕುರುಕ್ಷೇತ್ರ ಚಿತ್ರದ ಅನುಭವ ಡಿಫರೆಂಟಾಗಿಯಂತೂ ಇದೆ.