ನಟಿ ವೇದಿಕಾ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ. ಈಗಾಗಲೇ ಶಿವರಾಜ್ ಕುಮಾರ್, ದರ್ಶನ್, ಗಣೇಶ್‍ರಂತಹ ಸ್ಟಾರ್‍ಗಳ ನಟಿಸಿರುವ ನಟಿ. ಬ್ಯುಸಿ ನಟಿಯೂ ಹೌದು. ಈ ವೇದಿಕಾ ನಟಿಸಿರುವ ಹೊಸ ಚಿತ್ರ ಗೌಡ್ರು ಹೋಟೆಲ್. ಆ ಚಿತ್ರದ ನಿರ್ಮಾಪಕ ಕುಮಾರ್‍ಗೆ, ನಮ್ ಚಿತ್ರದ ಹೀರೋಯಿನ್ ವೇದಿಕಾ ತುಂಬಾ ಒಳ್ಳೇವ್ರು ಎನಿಸಿ ಖುಷಿಯಾಗಿಬಿಟ್ಟಿದ್ದಾರೆ.
ಅದಕ್ಕೆಲ್ಲ ನಿರ್ಮಾಪಕರ ಬಳಿ ಕಾರಣಗಳೂ ಇವೆ. ಚಿತ್ರದ ನಾಯಾಕ ರಚನ್, ಚಿತ್ರರಂಗಕ್ಕೇ ಹೊಸಬ. ಆತನ ಜೊತೆ ವರ್ಕ್‍ಶಾಪ್‍ನಲ್ಲಿ ಭಾಗವಹಿಸಬೇಕು ಎಂದಾಗ, ಯಾವುದೇ ತಕರಾರಿಲ್ಲದೆ ವರ್ಕ್‍ಶಾಪ್‍ನಲ್ಲಿ ಭಾಗವಹಿಸಿದ್ದರಂತೆ ವೇದಿಕಾ. ಇನ್ನು ಎರಡನೆಯದ್ದು, ಹಾಕಿಕೊಂಡಿದ್ದ ಶೂನಲ್ಲಿ ಜಿರಳೆಯಿದ್ದರೂ, ಗಲಾಟೆ ಮಾಡಿಲ್ಲ. 3ನೆಯದ್ದು ಸ್ವಿಮ್ಮಿಂಗ್ ಮಾಡುವಾಗ ಜಾಕೆಟ್‍ನ ಬಟನ್ ಕಿತ್ತುಹೋಗಿದ್ದನ್ನು ಗಮನಕ್ಕೆ ತಂದು, ಸರಿಪಡಿಸಿದ ನಂತರ ನಟಿಸಿದ್ದಾರೆ.
ವೇದಿಕಾ ಅವರ ಈ ವರ್ತನೆ, ನಿರ್ಮಾಪಕ ಕುಮಾರ್ ಅವರಿಗೆ ಇಷ್ಟವಾಗಿಬಿಟ್ಟಿದೆ. ಇಂಥದ್ದಕ್ಕೆಲ್ಲ ಖುಷಿಯಾಗ್ತಾರೇನ್ರಿ..ಸುಮ್ ಸುಮ್ನೆ ಹೇಳಬೇಡಿ ಅಂಥಾ ನಗಬೇಡಿ. ಸಿನಿಮಾ ಶೂಟಿಂಗ್ ಎಷ್ಟೋ ಬಾರಿ ಇದಕ್ಕಿಂತ ಚಿಕ್ಕ ಚಿಕ್ಕ ಸಮಸ್ಯೆಗಳ ಕಾರಣಕ್ಕೆ ಪ್ಯಾಕಪ್ ಆದ ಉದಾಹರಣೆಗಳಿವೆ. ನಿರ್ಮಾಪಕ ಕುಮಾರ್ ಖುಷಿಗೆ ಇದೇ ಕಾರಣ.