ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ದನಕಾಯೋನು ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಚೆಕ್ಬೌನ್ಸ್ ಕೇಸ್ ಹಾಕುತಿರುವುದು ಗೊತ್ತಿರುವ ವಿಚಾರ. ಈ ಕೇಸ್ನ ಎಫೆಕ್ಟ್ ತಟ್ಟಲಿರುವುದು ಶ್ರೀನಿವಾಸರ ಮುಂದಿನ ಚಿತ್ರ ಭರ್ಜರಿ ಚಿತ್ರದ ರಿಲೀಸ್ಗೆ. ಹೀಗಾಗಿ ಧ್ರುವ ಸರ್ಜಾ ಅವರ ಕೆಲವು ಅಭಿಮಾನಿಗಳು ಭಟ್ಟರ ಮನೆಯೆದುರು ಪ್ರತಿಭಟನೆ ನಡೆಸಿದ್ದರು. ನೀವು ನೀವು ಏನಾದರೂ ಮಾಡಿಕೊಳ್ಳಿ, ನಮ್ಮ ಹೀರೋ ಚಿತ್ರ ಬಿಡುಗಡೆಗೆ ಅಡ್ಡಿ ಮಾಡಬೇಡಿ ಎಂದು ಭಟ್ಟರ ಮನೆಯ ಎದುರು ಜಮಾಯಿಸಿದ್ದರು. ಆದರೆ ಆಗಿದ್ದೇ ಬೇರೆ. ಘಟನೆಯ ಇನ್ನೊಂದು ಮುಖವನ್ನು ಚಿತ್ರಲೋಕ ಮೂಲಗಳು ಹೇಳಿದಾಗ ಹೊರಬಿದ್ದಿದ್ದೇ ಬೇರೆ.
ಭಟ್ಟರ ಮನೆಯೆದರು ಜಮಾಯಿಸಿದ್ದ ಜನರನ್ನು ನೋಡಿದ ಕೆಲವರು, ಈ ಬಗ್ಗೆ ಸಮೀಪದ ಪೊಲೀಸ್ ಸ್ಟೇಷನ್ಗೆ ಮಾಹಿತಿ ನೀಡಿದರು. ತಕ್ಷಣ ಬಂದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ಹುಡುಗರನ್ನೆಲ್ಲ ವಶಕ್ಕೆ ತೆಗೆದುಕೊಂಡರು. ಅದಾದ ಮೇಲೆ ಭಟ್ಟರು ಅನಿವಾರ್ಯವಾಗಿ ಠಾಣೆಗೆ ಹೋಗಲೇ ಬೇಕಾಯ್ತು.
ಆದರೆ, ಹೋಗಿದ ಮೇಲೆ ನೋಡಿದರೆ, ಎಲ್ಲರೂ ಚಿಕ್ಕ ವಯಸ್ಸಿನ ಹುಡುಗರು. ಪೊಲೀಸರು ನೀವು ದೂರು ಕೊಟ್ಟರೆ, ಇವರನ್ನು ಬಂಧಿಸುತ್ತೇವೆ ಎಂದು ಹೇಳಿದಾಗ, ಭಟ್ಟರ ಮನಸ್ಸಿಗೇ ಕಸಿವಿಸಿಯಾಯಿತು. ಆ ಹುಡುಗರೋ.. ಊಟವನ್ನೂ ಮಾಡಿಲ್ಲ ಎನ್ನುವುದು ನೋಡಿದರೇನೇ ತಿಳಿಯುತ್ತಿತ್ತು. ಹೀಗಾಗಿ ಭಟ್ಟರೇ ಮನಸ್ಸು ಕರಗಿ ದೂರು ನೀಡದೆ, ಪೊಲೀಸರಿಗೆ ತಾವೇ ಸಮುಜಾಯಿಷಿ ನೀಡಿ, ಹುಡುಗರನ್ನು ಬಿಡಿಸಿದರು. ಅಷ್ಟೇ ಅಲ್ಲ ತಮ್ಮ ಜೇಬಿನಿಂದಲೇ ಹಣ ಕೊಟ್ಟು, ಒಂದು ಸಾವಿರ ಖರ್ಚು ಮಾಡಿ, ಹುಡುಗರಿಗೆ ಊಟವನ್ನೂ ಕೊಡಿಸಿ, ಬುದ್ದಿ ಹೇಳಿ ಕಳಿಸಿದರು.
ಮುಗುಳ್ನಗೆ ಚಿತ್ರ, ಥಿಯೇಟರುಗಳಲ್ಲಿಲ ಹೌಸ್ಫುಲ್ ಆದ ಖುಷಿಯಲ್ಲಿದ್ದ ಭಟ್ಟರಿಗೆ, ದನಕಾಯೋನು ಚಿತ್ರದ ನಿರ್ಮಾಪಕ ಹಣ ನೀಡಿಲ್ಲ. ಸಂಭಾವನೆಯ ಹಣ ನೀಡದೆ ಓಡಾಡುತ್ತಿರುವ ಶ್ರೀನಿವಾಸ್ ವಿರುದ್ಧ ದೂರು ನೀಡಿರುವ ಭಟ್ಟರು, ಪ್ರತಿಭಟನೆ ಮಾಡಲು ಬಂದವರಿಗೂ ಊಟ ಕೊಡಿಸಿ ಕಳಿಸಬೇಕಾಯ್ತು. ದನಕಾಯೋನು ಮುಗುಳ್ನಕ್ಕಾಗ ಎಂದಿದ್ದು ಇದಕ್ಕೇನೆ.
Related Articles :-