` ಸುದರ್ಶನ್ ಸಾವಿನ ಮಧ್ಯೆ ಹಿಡಿತ ತಪ್ಪಿದರಾ ಶಿವರಾಮಣ್ಣ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
why did shivaram speak like that
Shivaram, Sudharshan Image

ಮಾತು ಆಡಿದರೆ ಹೋಯ್ತು..ಮುತ್ತು ಒಡೆದರೆ ಹೋಯ್ತು ಅನ್ನೋದು ಗಾದೆ. ಹೀಗಾಗಿಯೇ ಒಂದು ಉನ್ನತ ಸ್ಥಾನಕ್ಕೆ ಏರಿದವರು ಒಂದೊಂದು ಮಾತು ಆಡುವಾಗಲೂ ಹತ್ತು ಸಲ ಯೋಚಿಸ್ತಾರೆ. ಆದರೆ, ಸುದರ್ಶನ್ ಸಾವಿನ ವೇಳೆ  ಕನ್ನಡದ ಹಿರಿಯ ನಟ ಶಿವರಾಮ್ ಆಡಿರುವ ಕೆಲವು ಮಾತುಗಳು ಅವರು ಆಡಿರುವ ಕೆಲವು ಮಾತುಗಳು ಅವರು ತಮ್ಮ ಮಾತಿನ ಹಿಡಿತ ತಪ್ಪಿದರಾ ಎಂಬ ಅನುಮಾನ ಮೂಡಿಸದೇ ಇರದು.

ಹಿರಿಯ ಕಲಾವಿದ ಸುದರ್ಶನ್, ಆಸ್ಪತ್ರೆಯಲ್ಲಿದ್ದಾಗ ಅವರ ಕೊನೆ ಗಳಿಗೆಯಲ್ಲಿ ಹತ್ತಿರವಿದ್ದು ನೋಡಿಕೊಂಡ ಹಲವು ಜನರಲ್ಲಿ ಶಿವರಾಮ್ ಕೂಡಾ ಒಬ್ಬರು. ಶುಕ್ರವಾರ ಬೆಳಗ್ಗೆ ಸುದರ್ಶನ್ ನಿಧನರಾದಾಗ ಸುವರ್ಣ ನ್ಯೂಸ್​ನಲ್ಲಿ ಶಿವರಾಮ್ ಮಾತನಾಡಿರುವುದು ಅವರು ಮಾತಿನ ಮೇಲೆ ಹಿಡಿತ ತಪ್ಪಿದರಾ ಎಂಬ ಅನುಮಾನ ಮೂಡಿಸುವ ಹಾಗಿದೆ.

ಸುದರ್ಶನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಂಸ ಅಥವಾ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಿಕೊಡುವಂತೆ ನಾನು ಸಚಿವೆ ಉಮಾಶ್ರೀ ಅವರಲ್ಲಿ ಕೇಳಿದೆ.ಅವರು ಆಗಲ್ಲ ಎಂದರು ಎನ್ನುವುದು ಶಿವರಾಮ್ ಮಾತು.

driver_hanumanthu_sudharsha.jpgಆದರೆ, ಉಮಾಶ್ರೀ ಅವರ ಜೊತೆ ಆ ವೇಳೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದವರು ನಟಿ

ಹೇಮಾಚೌಧರಿ. ಹೀಗಿದ್ದರೂ ಶಿವರಾಮ್ ಹೀಗೆ ಹೇಳಿದ್ದೇಕೆ..? ಅಷ್ಟೇ ಅಲ್ಲ, ಉಮಾಶ್ರೀ ಮತ್ತು ಜಯಮಾಲಾ ಇಬ್ಬರೂ ಕೂಡಾ ಶ್ರಮವಹಿಸಿ ಸರ್ಕಾರದಿಂದ ಸುದರ್ಶನ್ ಅವರಿಗೆ ಸಿಗಬಹುದಾದ ಪ್ರತಿ ನೆರವನ್ನೂ ಒದಗಿಸಿಕೊಟ್ಟಿದ್ದಾರೆ. ಇದು ಶಿವರಾಮ್ ಅವರಿಗೆ ಗೊತ್ತಿರಲಿಲ್ಲವೇ..? ಅಥವಾ ಗೊತ್ತಿದ್ದೂ ಹಾಗೆ ಹೇಳಿದರೆ..? ಇದು ಅರ್ಥವೇ ಆಗುತ್ತಿಲ್ಲ.

ಇನ್ನು ಫಿಲಂಚೇಂಬರ್​ನಲ್ಲಿ ಪಾರ್ಥಿವ ಶರೀರ ಇಡಲು ಅವಕಾಶವಿಲ್ಲ ಎಂದದ್ದೂ ಕೂಡಾ ಅರ್ಥಹೀನ ವಿಚಾರವೇ. ಏಕೆಂದರೆ, ಮೊದಲು ಫಿಲಂಚೇಂಬರ್​ನಲ್ಲಿ ಅದಕ್ಕೆಲ್ಲ ಅವಕಾಶವಿತ್ತು. ಜಾಗವೂ ಇತ್ತು. ಆದರೆ, ರಸ್ತೆ ವಿಸ್ತರಣೆ ವೇಳೆ ಸರ್ಕಾರದ ಮನವಿಗೆ ಸ್ಪಂದಿಸಿದ ಫಿಲಂ ಚೇಂಬರ್, ತನ್ನ ಜಾಗವನ್ನು ರಸ್ತೆಗೆ ಬಿಟ್ಟು ಕೊಟ್ಟ ಮೇಲೆ ಫಿಲಂಚೇಂಬರ್​ನಲ್ಲಿ ಜಾಗವಿಲ್ಲ ಎನ್ನುವುದು ಶಿವರಾಮ್​ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಿದ್ದರೂ ಅವರೇಕೆ ಹಾಗೆ ಹೇಳಿದರೋ..?

ಇನ್ನು ಚಿತ್ರರಂಗದವರು ಯಾರೊಬ್ಬರೂ ಬರಲಿಲ್ಲ.ಕೋಟಿ ಕೋಟಿ ಪಡೆಯುತ್ತಿರುವವರು ಎಲ್ಲಿ ಹೋದರು..? ಚಿತ್ರರಂಗದಲ್ಲಿ ಇವರು ತಿನ್ನುವುದರನ್ನು ನಾವು ಬೆಳೆಸಿಬಿಟ್ಟ ಬೆಳೆಯ ಎಂಜಲನ್ನು ಎಂದುಬಿಟ್ಟಿದ್ದಾರೆ ಶಿವರಾಮ್. ಕನ್ನಡ ಚಿತ್ರರಂಗವನ್ನು ಬೆಳೆಸಿದವರಲ್ಲಿ ಶಿವರಾಮ್ ಕೂಡಾ ಒಬ್ಬರು. ಅದರಲ್ಲಿ ಎರಡು ಮಾತಿಲ್ಲ. ಆದರೆ, ಈಗ ಇರುವವರೆಲ್ಲ ನಾವು ಬಿಟ್ಟ ಎಂಜಲು ತಿನ್ನುತ್ತಿದ್ದಾರೆ ಎನ್ನುವ ಮಾತಿದೆಯಲ್ಲ...ಇದರ ಅರ್ಥವೇನು..? ಚಿತ್ರರಂಗವನ್ನು ಬೆಳೆಸಿದ್ದು ಇವರೊಬ್ಬರೇನಾ..? ಇಷ್ಟಕ್ಕೂ ಸುದರ್ಶನ್ ಅವರಿಗೆ ನೆರವು ನೀಡಿರುವ ಹಲವು ಕಲಾವಿದರು ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಅದು ಶಿವರಾಮ್ ಅವರಿಗೂ ಗೊತ್ತು. 

ಹೀಗಿದ್ದರೂ, ಈಗಿನವರೆಲ್ಲ ನಾವು ಬಿಟ್ಟ ಎಂಜಲು ತಿನ್ನುತ್ತಿದ್ದಾರೆ ಎಂದು ಹೇಳಿರುವ ಅವರ ಮಾತು, ಅವರ ವ್ಯಕ್ತಿತ್ವಕ್ಕೆ, ಘನತೆಗೆ, ಹಿರಿತನಕ್ಕೆ ಸೂಕ್ತವಾದುದಲ್ಲ. ಏನೇ ಇದ್ದರೂ ಅವರನ್ನು ಚಿತ್ರರಂಗದ ಯುವ ಕಲಾವಿದರು, ತಂತ್ರಜ್ಞರು ಅವರನ್ನು ಪ್ರೀತಿಯಿಂದ, ಗೌರವದಿಂದ, ಅಭಿಮಾನದಿಂದ ಶಿವರಾಮಣ್ಣ ಎಂದೇ ಕರೆಯುತ್ತಾರೆ. ಶಿವರಾಮಣ್ಣನವರಿಗೆ ಇದೂ ಅರ್ಥವಾಗಬೇಕು.

Matthe Udbhava Trailer Launch Gallery

Maya Bazaar Pressmeet Gallery