` ಸುದರ್ಶನ್​ಗೆ ನೆರವಾದ ಉಮಾಶ್ರೀ, ಜಯಮಾಲಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
umashree and jaimala helps sudharshan's family
UmaShree, Jaymala, Sudharshan Image

ಚಿತ್ರರಂಗದ ಹಿರಿಯ ಕಲಾವಿದ ಸುದರ್ಶನ್ ಅವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಆದರೆ ಕಂಬನಿ ಮಿಡಿಯುವುದಷ್ಟೇ ಅಲ್ಲ, ಕಣ್ಣೀರು ಒರೆಸುವ ಕೈಗಳೂ ಅದೇ ಚಿತ್ರರಂಗದಲ್ಲಿವೆ ಎಂಬುದನ್ನು ಇಂದು ಸಾಬೀತು ಮಾಡಿದ್ದು ಸಚಿವೆ ಉಮಾಶ್ರೀ ಮತ್ತು ಶಾಸಕಿ ಜಯಮಾಲಾ.

ಸುದರ್ಶನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಬೇಕೇ ಬೇಡವೇ ಎಂಬ ಕಾನೂನು ಗೊಂದಲಗಳಲ್ಲಿ ಅಧಿಕಾರಿಗಳಿದ್ದಾಗ, ಅಲ್ಲಿಯೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಸಿಕೊಟ್ಟವರು ಸಚಿವೆ ಉಮಾಶ್ರೀ. ತಾವು ಸಚಿವರಾಗುವ ಮುನ್ನ, ರಾಜಕಾರಣಿಯಾಗುವ ಮುನ್ನ ಕಲಾವಿದೆ ಎಂಬುದನ್ನು ಸಾಬೀತು ಮಾಡಿದರು. 

ಇನ್ನು ಆಸ್ಪತ್ರೆಯ ಬಿಲ್​ನ್ನು ಕಟ್ಟಲು ಪರದಾಡುತ್ತಿದ್ದ ಸುದರ್ಶನ್ ಕುಟುಂಬದ ನೆರವಿಗೆ ಧಾವಿಸಿದ್ದು ನಟಿ ಜಯಮಾಲಾ. ಅವರು ಶಾಸಕಿಯೂ ಅಲ್ಲದೆ ಇಬ್ಬರೂ ಕಲಾವಿದರು ಕುಟುಂಬಕ್ಕೆ ಸರ್ಕಾರದಿಂದ ಇನ್ನಷ್ಟು ನೆರವು ಒದಗಿಸುವ ಭರವಸೆಯನ್ನೂ ಕೊಟ್ಟಿದ್ದಾರೆ. ಸುದರ್ಶನ್ ಅವರ ಅಂತಿಮ ಕ್ಷಣದಲ್ಲಿ ಅವರ ಜೊತೆಗಿದ್ದ ಹಿರಿಯ ನಟಿ ಹೇಮಾಚೌಧರಿ ಈ ಎಲ್ಲ ವಿಷಯವನ್ನೂ ಚಿತ್ರಲೋಕಕ್ಕೆ ತಿಳಿಸಿದ್ದಾರೆ.

ಕಲಾವಿದರ ಕಣ್ಣೊರೆಸುವ ಮೂಲಕ ನೆರವಿಗೆ ಬಂದ ಉಮಾಶ್ರೀ ಮತ್ತು ಜಯಮಾಲಾ ಅವರಿಗೆ ಕಲಾವಿದರು ಹಾಗೂ ಅಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

Related Articles :-

ಅಪಾರ ಕೀರ್ತಿ ಮೆರೆದ ಮನೆತನದ ಕುಡಿ ಸುದರ್ಶನ್

RN Sudarshan Expired

Matthe Udbhava Trailer Launch Gallery

Maya Bazaar Pressmeet Gallery