ಮುಗುಳುನಗೆ ಸಿನಿಮಾ ಹಿಟ್ ಆಗುವ ಹಾದಿಯಲ್ಲಿದೆ. ಮುಂಗಾರು ಮಳೆ ದಾಖಲೆ ಮುರಿದರೂ ಆಶ್ಚರ್ಯವಿಲ್ಲ. ಆದರೆ, ಸಿನಿಮಾ ನೋಡಿದವರಿಗೆ ಚಿತ್ರದ ಟೈಟಲ್ ಸಾಂಗ್ ಮಿಸ್ಸಾಗಿದೆ ಎಂಬ ಬೇಸರ ಕಾಡಿತ್ತು. ಚಿತ್ರ ನೋಡಿದ ಹಲವರು ಈ ಬಗ್ಗೆ ಬೇಸರ ತೋಡಿಕೊಂಡಿದ್ದರು.
ಪ್ರೇಕ್ಷಕರಿಗೆ ಇಷ್ಟೊಂದು ಇಷ್ಟವಾಗಿದ್ದ ಆ ಹಾಡನ್ನು ಈಗ ಚಿತ್ರತಂಡ ಥಿಯೇಟರಿಗೆ ಬಿಟ್ಟಿದೆ. ಮೊದಲ ವಾರದಲ್ಲಿ ಮಿಸ್ ಆಗಿದ್ದ ಮುಗುಳುನಗೆಯ ಹಾಡು ಇನ್ನು ಮೇಲೆ ಚಿತ್ರಮಂದಿರದಲ್ಲೂ ಕಾಣಿಸಲಿದೆ.ಪ್ರೇಕ್ಷಕರ ಒತ್ತಾಯದ ಮೇರೆಗೆ ಚಿತ್ರದಲ್ಲಿ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಶೀರ್ಷಿಕೆ ಗೀತೆಯನ್ನ ಸೇರಿಸಲಾಗಿದೆ.