ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ಗೆ ಬೇರೆ ಭಾಷೆಯಲ್ಲಿ ನಟಿಸುವುದು ಹೊಸದೇನೂ ಅಲ್ಲ. ಹಿಂದಿ, ತಮಿಳು, ತೆಲುಗಿನಲ್ಲಾಗಲೇ ಕಿಚ್ಚನ ಹೆಜ್ಜೆ ಗುರುತು ಮೂಡಿದೆ. ಆದರೆ, ಈಗ ಬರುತ್ತಿರುವ ಸುದ್ದಿ ಇನ್ನೂ ಹೊಸದು. ಇದು ಬಂದಿರೋದು ಬಾಲಿವುಡ್ನಿಂದ.
ಸಲ್ಮಾನ್ ಖಾನ್ ಅಭಿನಯದ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಸುದೀಪ್ ಖಳನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು 2012ರಲ್ಲಿ ಬಂದಿದ್ದ ಏಕ್ ಥಾ ಟೈಗರ್ ಚಿತ್ರದ ಸೀಕ್ವೆಲ್. ಆ ಚಿತ್ರದಲ್ಲಿ ಸಲ್ಮಾನ್ ಖಾನ್, ಭಾರತದ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದರು. ನಾಯಕಿಯಾಗಿ ಕತ್ರಿನಾ ಕೈಫ್ ಪಾಕ್ ಐಎಸ್ಐ ಏಜೆಂಟ್ ಆಗಿ ಕಾಣಿಸಿಕೊಂಡಿದ್ದರು. ಎರಡು ಶತ್ರು ದೇಶಗಳ ಗೂಢಚಾರರು ಪ್ರೀತಿಗಾಗಿ ದೇಶವನ್ನೇ ಬಿಟ್ಟು ನಿಗೂಢವಾಗಿ ಮರೆಯಾಗುವುದರೊಂದಿಗೆ ಚಿತ್ರ ಕೊನೆಯಾಗಿತ್ತು.
ಈಗ ಆ ಚಿತ್ರದ ಎರಡನೇ ಭಾಗ ಸಿದ್ಧವಾಗುತ್ತಿದೆ. ಹಾಗಾದರೆ, ನಾಪತ್ತೆಯಾಗಿದ್ದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ರನ್ನು ಹುಡುಕಿಕೊಂಡು ಬರುವ ಪಾಕ್ ಐಎಸ್ಐ ಏಜೆಂಟ್ ಆಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರಾ..? ಸದ್ಯಕ್ಕೆ ಇದು ಸಸ್ಪೆನ್ಸ್.ಸುದೀಪ್ ಪಾತ್ರದ ಹೆಸರು ಜಹೀರ್.
ಚಿತ್ರಕ್ಕೆ ಸುದೀಪ್ ಅವರನ್ನೇ ಆಯ್ಕೆ ಮಾಡಿಕೊಳ್ಳುವುದರ ಹಿಂದೆ ಬಾಕ್ಸಾಫೀಸ್ ಲೆಕ್ಕಾಚಾರವೂ ಇದೆ. ದಕ್ಷಿಣದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ, ತೆಲಂಗಾಣದಲ್ಲೂ ಸುದೀಪ್ ಚಿತ್ರಗಳಿಗೆ ಡಿಮ್ಯಾಂಡ್ ಇದೆ. ಹೀಗಾಗಿ ದಕ್ಷಿಣದ ಸ್ಟಾರ್ ನಟರನ್ನು ಹಾಕಿಕೊಳ್ಳುವ ಲೆಕ್ಕಾಚಾರ ಬಾಲಿವುಡ್ನದ್ದು. ಅದರ ಮೂಲಕ ಸುದೀಪ್ ಸ್ಟಾರ್ಗಿರಿಯ ಲಾಭ ಪಡೆಯುವ ಬ್ಯುಸಿನೆಸ್ ಲೆಕ್ಕಾಚಾರವೂ ಇದರ ಹಿಂದಿದೆ.
Related Articles :-