ಸನ್ನಿ ಲಿಯೋನ್ ಎಂದರೆ ಹುಡುಗರ ಕಣ್ಣುಗಳು ಅರಳುತ್ತವೆ. ಮನಸು ಎಲ್ಲೆಲ್ಲೋ ಹರಿದಾಡುತ್ತದೆ. ಹಾಗೆಂದು ಈಕೆ ಕನ್ನಡಿಗರಿಗೆ ಅಪರಿಚಿತಳೇನಲ್ಲ. ಪ್ರೇಮ್ ಅಭಿನಯದ ಡಿಕೆ ಚಿತ್ರದಲ್ಲಿ ಸೇಸಮ್ಮ ಸೇಸಮ್ಮ ಹಾಡಿನಲ್ಲಿ ಕುಣಿದಿದ್ದವರು. ಇಂದ್ರಜಿತ್ ಲಂಕೇಶ್ ಲವ್ ಯು ಅಲಿಯಾ ಚಿತ್ರದ ಹಾಡಿನಲ್ಲೂ ಕಾಣಿಸಿಕೊಂಡಿದ್ದವರು. ಆದರೆ, ಈ ಬಾರಿ ಅವರು ಐಟಂ ಸಾಂಗ್ಗಾಗಿ ಬರುತ್ತಿಲ್ಲ. ಚಿತ್ರವೊಂದರ ನಾಯಕಿಯಾಗಿ ಬರುತ್ತಿದ್ದಾರೆ.
ಮೋಹನ್ ಹಾಸನ್ ಎಂಬುವರ ನಿರ್ದೇಶನದ ನಿನ್ನದೇ ಹೆಜ್ಜೆ.ಕಾಂ ಸಿನಿಮಾದಲ್ಲಿ ಸನ್ನಿ ಲಿಯೋನ್ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಈ ವರ್ಷದ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಚಿತ್ರದ ಕಥೆ ಏನು..? ಸದ್ಯಕ್ಕೆ ಸೀಕ್ರೆಟ್.