` ಮತ್ತೆ ನಟಿಸಲು ನಾನು ರೆಡಿ - ರಾಘವೇಂದ್ರ ರಾಜ್‍ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ready to act again says raghavendra rajkuame
Raghavendra Rajkumar Image

ನಟ ರಾಘವೇಂದ್ರ ರಾಜ್‍ಕುಮಾರ್ ಮತ್ತೊಮ್ಮೆ ನಟಿಸಿಲು ಸಿದ್ಧರಾಗಿದ್ದಾರೆ. ಈಗಷ್ಟೇ ಆರೋಗ್ಯ ಸುಧಾರಿಸಿದೆ. ಹೀಗಾಗಿ ಮತ್ತೆ ನಟಿಸಲು ಸಿದ್ಧನಾಗಿದ್ದೇನೆ. ಹೀರೋ ಆಗಿ ಅಲ್ಲ. ನನ್ನ ವಯಸ್ಸಿಗೆ ಸೂಕ್ತವಾದ, ಅಭಿನಯಕ್ಕೆ ಅವಕಾಶವಿರುವ ಪೋಷಕ ಪಾತ್ರ ಸಿಕ್ಕರೂ ನಾನು ನಟಿಸಲು ರೆಡಿ ಎಂದಿದ್ದಾರೆ ರಾಘವೇಂದ್ರ ರಾಜ್‍ಕುಮಾರ್. ಪಾತ್ರ ಡೀಸೆಂಟ್ ಆಗಿರಬೇಕಷ್ಟೆ.

ಇನ್ನು ಪಾರ್ವತಮ್ಮ ರಾಜ್‍ಕುಮಾರ್ ಹೆಸರಲ್ಲಿ ಪ್ರತಿ ವರ್ಷ ಮೂವರಿಗೆ ಸೌಹಾರ್ದ ಪ್ರಶಸ್ತಿ ನೀಡಲು ಕೂಡಾ ನಿರ್ಧರಿಸಿದ್ದಾರಂತೆ. ಚಿತ್ರರಂಗದ ಒಬ್ಬರು ಹಾಗೂ ಬೇರೆ ಕ್ಷೇತ್ರದ ಇಬ್ಬರು ಮಹಿಳಾ ಸಾಧಕಿಯರಿಗೆ ಪ್ರತಿವರ್ಷ ಪ್ರಶಸ್ತಿ ನೀಡಲು ರಾಜ್ ಕುಟುಂಬದ ತೀರ್ಮಾನಿಸಿದೆ. ಇನ್ನು ಕಂಠೀರವ ಸ್ಟುಡಿಯೋದಲ್ಲಿ ಪಾರ್ವತಮ್ಮನವರ ಸಮಾಧಿ ಅಭಿವೃದ್ಧಿಗೂ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

Adi Lakshmi Purana Movie Gallery

Rightbanner02_butterfly_inside

Yaana Movie Gallery