ವಾರ್ತಾ ಮತ್ತು ಪ್ರಚಾರ ಇಲಾಖೆ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವ ಮಣಿವಣ್ಣನ್ ಅವರು ಇಂದು ಸಂಜೆ ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದರು. ಅಧ್ಯಕ್ಷ್ಯರಾದ ಸಾ ರಾ ಗೋವಿಂದು ಮತ್ತು ಚೇಂಬರ್ ನ
ಪದಾಧಿಕಾರಿಗಳು ಮಣಿವಣ್ಣನ್ ಅವರನ್ನು ಆದರದಿಂದ ಸ್ವಾಗತಿಸಿದರು. ಕನ್ನಡ ಚಿತ್ರರಂಗದ ಬಗ್ಗೆ, ಸರ್ಕಾರ ಒದಗಿಸಬಹುದಾದ ಪರಿಹಾರಗಳ ಬಗ್ಗೆ ಚರ್ಚೆ ನಡೆಸಿದರು. ಎಲ್ಲವನ್ನು ಆಲಿಸಿದ ಮಣಿವಣ್ಣನ್ ಅವರು ಎಲ್ಲ ಸಮಸೆಗಳನ್ನು ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.