` ಬೆಂಗಳೂರು ಪ್ರವಾಹ ನಿರ್ಮೂಲನೆಗೆ ಉಪ್ಪಿ ಐಡಿಯಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra, benaluru drainage soultion
Upendra Image

ಬೆಂಗಳೂರು ನದಿಗಳಿಲ್ಲದ, ಸಮುದ್ರ ತೀರಕ್ಕೆ ಹತ್ತಿರವೂ ಇಲ್ಲದ, ಕೆರೆಗಳಿಂದಲೇ ತುಂಬಿಕೊಂಡಿದ್ದ ಊರು. ಆದರೆ, ಕೆರೆಗಳಲ್ಲಿ ಮನೆ, ಕಾಂಪ್ಲೆಕ್ಸು ಕಟ್ಟಿ, ಚರಂಡಿಗಳನ್ನು ಹಾಳು ಮಾಡಿಕೊಂಡ ತಪ್ಪಿಗೆ ಈಗ ಬೆಂಗಳೂರು ಬೆಲೆ ತೆರುತ್ತಿದೆ. ಸಣ್ಣದೊಂದು ಮಳೆ ಬಂದರೂ, ಬೆಂಗಳೂರಿನಲ್ಲಿ ಪ್ರವಾಹ ಗ್ಯಾರಂಟಿ. ರಸ್ತೆಗಳೇ ನದಿಗಳಾಗಿ ಬದಲಾಗುವ ವಿಚಿತ್ರ ರಾಜಧಾನಿ ಬೆಂಗಳೂರು. 

ಇದಕ್ಕೆ ಪರಿಹಾರವೇ ಇಲ್ಲವೇ..? ಈ ಪ್ರಶ್ನೆಗೆ ಉಪೇಂದ್ರ ಒಂದು ಐಡಿಯಾ ಸಮೇತ ಬಂದಿದ್ದಾರೆ. ಹಾಗೆಂದು ಇದು ಅವರೇ ಅಧ್ಯಯನ ಮಾಡಿ ಕಂಡುಕೊಂಡ ಪರಿಹಾರವಲ್ಲ. ಸುಮಾರು 4 ವರ್ಷ ಈ ಕುರಿತು ಅಧ್ಯಯನ ಮಾಡಿರುವ ಸೌರವ್ ಬಾಬು ಎಂಬ ಯುವಕನ ಐಡಿಯಾ.

ಇದರ ಪ್ರಕಾರ, ಬೆಂಗಳೂರಿನ ಸಮಸ್ಯೆಗಳಿಗೆ ಕಾರಣ, ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದಿರುವುದೇ. ಒಂದು ಚರಂಡಿ ನಿರ್ಮಾಣ ಮಾಡೋಕೆ ಹತ್ತಾರು ಕಾಂಟ್ರಾಕ್ಟುಗಳನ್ನು ಮಾಡಿ, ರಸ್ತೆಗೆ ಮಣ್ಣು ಸುರಿಯುತ್ತಿದ್ದಾರೆಯೇ ಹೊರತು, ಚರಂಡಿಗೆ ನೀರು ಹೋಗುತ್ತಿಲ್ಲ. ಬದಲಿಗೆ ಅವರೇ ಹೊರತೆಗೆದ ಮಣ್ಣು ಸೇರುತ್ತಿದೆ. ನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಇದಕ್ಕೆ ಸೌರವ್ ಬಾಬು ಕಂಡುಕೊಂಡಿರುವ ಪರಿಹಾರದ ಹೆಸರು  ರೋಡ್ ಸೈಡ್ ಪೈಪ್ ಡ್ರೇನೇಜ್ ಸಿಸ್ಟಮ್.

ಸರಳವಾಗಿ ಹೇಳೋದಾದರೆ, ಪ್ರತಿ ರಸ್ತೆಗಳ ಪಕ್ಕ ಡ್ರೈನೇಜ್ ಪೈಪ್​ಗಳನ್ನು ಹಾಕಿ, ಆ ಪೈಪುಗಳಿಗೆ ರಸ್ತೆಯಲ್ಲಿ ಬಿದ್ದ ನೀರು ಹೋಗುವಂತೆ ಮಾಡುವುದು. ಮಧ್ಯೆ ಮಧ್ಯೆ ಚೇಂಬರ್ ಮಾಡಿ, ಅವುಗಳನ್ನು ಲಿಂಕ್ ಮಾಡಿದರೆ, ಬಿದ್ದ ನೀರು ಎಲ್ಲಿಯೂ ನಿಲ್ಲದೆ ಹರಿದು ಹೋಗುತ್ತೆ. ಅಕಸ್ಮಾತ್ ಕಸ ಕಟ್ಟಿಕೊಂಡರೂ, ಕ್ಲೀನ್ ಮಾಡುವುದು ಸುಲಭ.

ಅಷ್ಟೇ ಅಲ್ಲ, ಈಗ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಗೆ ಆಗುತ್ತಿರುವ ಖರ್ಚಿಗಿಂತ ಅರ್ಧಕ್ಕರ್ಧ ಕಡಿಮೆ ಬಜೆಟ್​ನಲ್ಲಿ ಇದನ್ನು ಮಾಡಲು ಸಾಧ್ಯ. ಖರ್ಚಿನ ಲೆಕ್ಕದಲ್ಲಷ್ಟೇ ಅಲ್ಲ, ಈಗ  ಮೂರು ತಿಂಗಳಲ್ಲಿ ಆಗುವ ಕೆಲಸವನ್ನು, ಡ್ರೈನೇಜ್ ಪೈಪ್ ಹಾಕಿದರೆ, ಏಳೇ ದಿನಗಳಲ್ಲಿ ಮಾಡಬಹುದು. 

ಈ ಕುರಿತು ಪ್ರಾಜೆಕ್ಟ್​ವೊಂದನ್ನು ಸಿದ್ಧಮಾಡಿದ ಸೌರವ್ ಬಾಬು, ಬಿಬಿಎಂಪಿಯವರನ್ನು ಸಂಪರ್ಕಿಸಿದರೂ, ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಅವರಿಗೆ ವರ್ಷ ವರ್ಷ ಹೊಸ ಹೊಸ ಕಾಂಟ್ರಾಕ್ಟ್ ಕೊಡಬೇಕು. ಆದರೆ, ಈ ವ್ಯವಸ್ಥೆಯಲ್ಲಿ ಒಮ್ಮೆ ಸಿದ್ಧ ಮಾಡಿದರೆ, ನಿರ್ವಹಣೆಯದ್ದಷ್ಟೇ ಜವಾಬ್ದಾರಿ. ಹೊಸ ಕಾಂಟ್ರಾಕ್ಟ್ ಕೊಡುವ ಅಗತ್ಯ ಇರೋದಿಲ್ಲ. ಸರ್ಕಾರಿ ಕಚೇರಿಗಳನ್ನು ಅಲೆದು ಬೇಸತ್ತ ಸೌರವ್ ಬಾಬು ತಮ್ಮ ಐಡಿಯಾವನ್ನು ತೆಗೆದುಕೊಂಡು ಪ್ರಜಾಕೀಯದ ಉಪೇಂದ್ರ ಬಳಿ ಬಂದಿದ್ದಾರೆ. ಉಪೇಂದ್ರ ಅವರಿಗೆ ಈ ಐಡಿಯಾ ಇಷ್ಟವಾಗಿದೆ. ಅದನ್ನೀಗ ಅವರು ಜನರ ಮುಂದಿಟ್ಟಿದ್ದಾರೆ. ಸರ್ಕಾರಕ್ಕೆ ಕೇಳಿಸುತ್ತಾ..? ಅರ್ಥವಾಗುತ್ತಾ..? ಅಟ್​ಲೀಸ್ಟ್ ಚರ್ಚೆಯಾದರೂ ಶುರುವಾಗುತ್ತಾ..?

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery