` ಸುದೀಪ್ ಸಮಾಜಸೇವೆಯ ಕಂಪ್ಲೀಟ್ ಡೀಟೈಲ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep social service details
Sudeep Image

ನಾನು ಕೋಟ್ಯಧಿಪತಿ ಅಲ್ಲ. ಆದರೆ ಸಂಪಾದಿಸಿದ್ದರಲ್ಲಿ ಶೇ.40ರಿಂದ 50ರಷ್ಟನ್ನು ಸಮಾಜಕ್ಕೆ ವಾಪಸ್ ಕೊಡುತ್ತಿದ್ದೇನೆ. ಇದು ಸುದೀಪ್ ಅವರೇ ಹೇಳಿಕೊಂಡಿರುವ ಮಾತು. ಇತ್ತೀಚೆಗಷ್ಟೇ ರಾಜಕೀಯಕ್ಕೆ ಬರುತ್ತೀರಾ ಎಂದು ಕೇಳಿದಾಗ, ನಾನು ನನ್ನ ಹಣದಲ್ಲಿ ನನ್ನ ಕೈಲಾದಷ್ಟು ಸಮಾಜಸೇವೆ ಮಾಡುತ್ತಿದ್ದೇನೆ. ಸೇವೆ ಮಾಡೋಕೆ ರಾಜಕೀಯಕ್ಕೆ ಬರಬೇಕು ಎಂಬ ಅನಿವಾರ್ಯತೆ ಇಲ್ಲ ಎಂದಿದ್ದರು. ಈಗ ತಮ್ಮ ಸಮಾಜಸೇವೆಯ ಕೆಲಸಗಳನ್ನು ಬಹಿರಂಗಪಡಿಸಿದ್ದಾರೆ.

ಸುದೀಪ್ ಒಟ್ಟು 18 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಅವರ ಸಂಪೂರ್ಣ ಹೊಣೆ ಅವರದ್ದೇ. ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದಾರೆ. ಒಂದು ಅನಾಥಾಶ್ರಮವನ್ನೂ ನಡೆಸುತ್ತಿದ್ದಾರೆ. ಇದೆಲ್ಲವೂ ಅವರ ಸ್ವಂತ ಹಣದಲ್ಲಿಯೇ ನಡೆಯುತ್ತಿದೆ. 

ಸುದೀಪ್ ಅವರನ್ನು ಮೆಚ್ಚಿಕೊಳ್ಳೋಕೆ ಇನ್ನಷ್ಟು ಕಾರಣಗಳು ಸಿಕ್ಕಿವೆ. ಅಷ್ಟೇ ಅಲ್ಲ, ಸಂಕಷ್ಟದಲ್ಲಿರುವ ಚಿತ್ರರಂಗದ ಕೆಲವರಿಗೆ ವೈಯಕ್ತಿಕವಾಗಿ ಸಹಾಯ ಮಾಡಿರುವುದನ್ನು ಸುದೀಪ್ ಹೊರಗೆ ಹೇಳಿಕೊಳ್ಳೋದಿಲ್ಲ. ಅದು ಸುದೀಪ್ ದೊಡ್ಡಗುಣ.