ನಟ ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಇತ್ತೀಚೆಗಷ್ಟೇ ಸುದೀಪ್ ನಾನು ರಾಜಕೀಯಕ್ಕೆ ಬರಲ್ಲ. ಸೇವೆ ಮಾಡೋಕೆ ರಾಜಕೀಯಕ್ಕೇ ಬರಬೇಕು ಅಂತೇನೂ ಇಲ್ಲ. ರಾಜಕೀಯದಿಂದ ದೂರವಿದ್ದುಕೊಂಡೇ ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ ಎಂದಿದ್ದರು. ಆದರೆ, ಬಿಜೆಪಿ ಮುಖಂಡ ಆರ್.ಅಶೋಕ್ ಹೊಸ ಹೇಳಿಕೆಯನ್ನೇ ನೀಡಿದ್ದಾರೆ.
ನನ್ನ ಚುನಾವಣಾ ಪ್ರಚಾರ ಉದ್ಘಾಟಿಸಿದ್ದೇ ಸುದೀಪ್. ನಾನು ಮತ್ತು ಸುದೀಪ್ ಒಳ್ಳೆಯ ಸ್ನೇಹಿತರು. ನಾನು ಸುದೀಪ್ ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಸುತ್ತೇನೆ. ಸಾಕಷ್ಟು ಸ್ಟಾರ್ಗಳು ಬಿಜೆಪಿ ಪರ ಪ್ರಚಾರಕ್ಕೆ ಬರುತ್ತಾರೆ ಎಂದಿದ್ದಾರೆ ಅಶೋಕ್.
ದರ್ಶನ್ ಕಾಂಗ್ರೆಸ್ಗೆ ಹೋಗ್ತಾರೆ ಅನ್ನೋ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಆರ್.ಅಶೋಕ್, ಚುನಾವಣೆ ಸಮಯದಲ್ಲಿ ಸ್ಪಷ್ಟ ಉತ್ತರ ನೀಡುತ್ತೇನೆ ಎಂದಿದ್ದಾರೆ.