` ಫೇಸ್‍ಬುಕ್‍ನಲ್ಲಿ ನಂ.1 ಕನ್ನಡ ಹೀರೋಯಿನ್ ಯಾರು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kannada heroine popular in facebook
Who is popular heroine in FB..?

ಫೇಸ್‍ಬುಕ್, ಟ್ವಿಟರ್, ಲಿಂಕೆಡಿನ್, ಇನ್‍ಸ್ಟಾಗ್ರಾಮ್..ಹೀಗೆ ಸೆಲಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿರೋಕೆ ಈಗ ಹಲವು ವೇದಿಕೆಗಳಿವೆ. ಫೇಸ್‍ಬುಕ್‍ನ್ನು ಜಗತ್ತಿನ ಅತಿ ದೊಡ್ಡ ಧರ್ಮ ಎಂದು ಕರೆಯಲಾಗುವ ಈ ಸಮಯದಲ್ಲಿ, ಕನ್ನಡದ ಯಾವ ಹೀರೋಯಿನ್‍ಗಳು ಈ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯರು..? ಒಂದು ಇಂಟ್ರೆಸ್ಟಿಂಗ್ ಸ್ಟೇಟಸ್ ಇಲ್ಲಿದೆ.

ಕನ್ನಡದ ಹೀರೋಯಿನ್‍ಗಳ ಪೈಕೆ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಸಣ್ಣದೊಂದು ಲಿಸ್ಟ್ ಇಲ್ಲಿದೆ..

ಪ್ರಿಯಾಮಣಿ - 2.5 ಮಿಲಿಯನ್ ಫಾಲೋವರ್ಸ್

ಹರಿಪ್ರಿಯಾ - 2.5 ಮಿಲಿಯನ್ ಫಾಲೋವರ್ಸ್

ಮೇಘನಾ ರಾಜ್ - 2.5 ಮಿಲಿಯನ್ ಫಾಲೋವರ್ಸ್

ಸಂಜನಾ ಗರ್ಲಾನಿ - 2.2 ಮಿಲಿಯನ್ ಫಾಲೋವರ್ಸ್

ರಾಗಿಣಿ ದ್ವಿವೇದಿ - 1.9 ಮಿಲಿಯನ್ ಫಾಲೋವರ್ಸ್

ನಿಕ್ಕಿ ಗರ್ಲಾನಿ - 1.9 ಮಿಲಿಯನ್ ಫಾಲೋವರ್ಸ್

ಇದು ಕೇವಲ ಅಂಕಿಅಂಶಗಳಷ್ಟೆ. ಅಭಿಮಾನವನ್ನು ಪಾಲೋವರ್ಸ್‍ಗಳ ನಂಬರ್‍ಗಳಲ್ಲಿ ಅಳೆಯುವುದು ತಪ್ಪಾದೀತು. ಆದರೆ, ಇಲ್ಲೊಂದು ಸ್ವಾರಸ್ಯವಿದೆ. ರಾಗಿಣಿ ಮತ್ತು ಹರಿಪ್ರಿಯ ಸ್ಯಾಂಡಲ್‍ವುಡ್‍ಗೆ ಸೀಮಿತರಾಗಿರುವವರು. ತಮಿಳು, ತೆಲುಗು, ಮಲಯಾಳಂ..ಹೀಗೆ ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಿಲ್ಲ. ಇವರ ಫಾಲೋವರ್ಸ್‍ಗಳಲ್ಲಿ ಹೆಚ್ಚಿರುವುದು ಕನ್ನಡಿಗರು.

ಇನ್ನು ಪ್ರಿಯಾಮಣಿ ಪಂಚಭಾಷಾ ತಾರೆ. ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳಲ್ಲಿ ನಟಿಸಿರುವವರು. ಮೇಘನಾ ರಾಜ್, ಕನ್ನಡಕ್ಕಿಂತ ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಪ್ಯಾಪುಲರ್. ಸಂಜನಾ ತೆಲುಗಿನಲ್ಲಿ ಮತ್ತು ನಿಕ್ಕಿ ಮಲಯಾಳಂನಲ್ಲಿ ನಟಿಸಿರುವವರು. ಅವರ ಫಾಲೋವರ್ಸ್‍ಗಳಲ್ಲಿ ಸಹಜವಾಗಿಯೇ ಆ ರಾಜ್ಯದವರೂ ಇರುತ್ತಾರೆ.

ಇನ್ನೂ ಕೆಲವು ನಟಿಯರು ಫೇಸ್‍ಬುಕ್‍ನಲ್ಲಿ ಇಲ್ಲ. ಇರುವ ಕೆಲವರಲ್ಲಿ ಬಹುತೇಕ ನಟಿಯರು ಆಕ್ಟಿವ್ ಇಲ್ಲ. ಈಗ ನೀವೇ ನಿರ್ಧರಿಸಿ. ಕನ್ನಡದ ಜನಪ್ರಿಯ ಹೀರೋಯಿನ್ ಯಾರು ಅನ್ನೋದನ್ನ.