ಚಿತ್ರನಟಿ ಸಿಂಧು ಲೋಕನಾಥ್ ಮದುವೆಯಾಗಿದ್ದಾರೆ. ಆದರೆ, ಅದನ್ನು ಬಹಿರಂಗಪಡಿಸದ ಕಾರಣಕ್ಕಷ್ಟೇ ಇದು ರಹಸ್ಯ ಮದುವೆ. ಪುಮಾ ಕಂಪೆನಿಯ ಉದ್ಯೋಗಿಯಾಗಿರುವ ಶ್ರೇಯಸ್ ಎಂಬುವರ ಜೊತೆ ಸಿಂಧು ಸಪ್ತಪದಿ ತುಳಿದಿದ್ದಾರೆ. ಶ್ರೇಯಸ್ ಮೂಲತಃ ಮಂಗಳೂರಿನವರು. ಇವರಿಬ್ಬರ ಮಧ್ಯೆ 2 ವರ್ಷದಿಂದ ಪ್ರೀತಿಯಿತ್ತು. ಈಗ ಮದುವೆಯಾಗಿದೆ.
ಆಗಸ್ಟ್ 27ನೇ ತಾರೀಕು, ಮಡಿಕೇರಿಯ ಕಾವೇರಿ ಹಾಲ್ನಲ್ಲಿ ಬೆಳಗ್ಗೆ 11 ಗಂಟೆಯಿಂದ ನಡೆದ ತುಲಾ ಮುಹೂರ್ತದಲ್ಲಿ ಮದುವೆಯಾಗಿದೆ. ತಂದೆ ತಾಯಿಯೇ ನಿಂತು ಈ ಮದುವೆ ನೆರವೇರಿಸಿಕೊಟ್ಟಿದ್ದಾರೆ.
ಸಿಂಧು ಲೋಕನಾಥ್ ಮೂಲತಃ ಕೊಡಗಿನವರು. ಪರಿಚಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಿಂಧು, ರಾಕ್ಷಸಿ, ಯಾರೇ ಕೂಗಾಡಲಿ, ಡ್ರಾಮಾ, ಲವ್ ಇನ್ ಮಂಡ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮದುವೆಯ ಕುರಿತು ಪ್ರತಿಕ್ರಿಯೆ ಕೇಳಲು ಪ್ರಯತ್ನಿಸಿದರೆ, ಸದ್ಯಕ್ಕೆ ಸಿಂಧು ಫೋನ್ ಸ್ವಿಚ್ ಆಫ್.