` ರಾಜಕೀಯಕ್ಕೆ ಬರ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
will darshan join politics
Darshan Image

ರಿಯಲ್ ಸ್ಟಾರ್ ಉಪೇಂದ್ರ ಹೊಸ ರಾಜಕೀಯ ಪಕ್ಷವನ್ನೇ ಸ್ಥಾಪಿಸಲು ಮುಂದಾಗಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಹಲವು ಸ್ಟಾರ್‍ಗಳನ್ನು ತಮ್ಮ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳೋಕ ಕಸರತ್ತು ನಡೆಸುತ್ತಿವೆ. ಅಂತಹ ಕಸರತ್ತಿನಲ್ಲಿ ನಟ ದರ್ಶನ್‍ಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ.

ದರ್ಶನ್ ಅವರನ್ನು ರಾಜಕೀಯಕ್ಕೆ ಸೆಳೆಯುವ ಹಾದಿಯಲ್ಲಿ ಬೇರೆಯವರ್ಯಾರೇ ಪ್ರಯತ್ನ ಪಟ್ಟಿದ್ದರೂ, ಸುದ್ದಿಗೆ ಇಷ್ಟು ದೊಡ್ಡ ಮೈಲೇಜ್ ಸಿಗುತ್ತಿರಲಿಲ್ಲ. ಆದರೆ, ದರ್ಶನ್ ತುಂಬಾ ಗೌರವಿಸುವ ಅಂಬರೀಷ್ ಅವರೇ ಈ ನಿಟ್ಟನಿಲ್ಲಿ ಹೆಜ್ಜೆಯಿಟ್ಟಿರುವ ಹಿನ್ನೆಲೆಯಲ್ಲಿ ಸುದ್ದಿಗೆ ಮಹತ್ವ ಬಂದುಬಿಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡಾ ದರ್ಶನ್ ಅವರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ.

ಈಗಾಗಲೇ ದರ್ಶನ್ ತಾಯಿ ಮೀನಾ ಅವರಿಗೆ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ ಎಂಬ ಮಾಹಿತಿಯೂ ಇದೆ. ಹಾಲಿ ಸ್ಟಾರ್‍ಗಳನ್ನು ಕರೆತಂದರಷ್ಟೇ ಪಕ್ಷಕ್ಕೆ ಲಾಭ ಎಂದು ಮನಗಂಡಿರುವ ಕಾಂಗ್ರೆಸ್, ಈ ಹಾದಿಯಲ್ಲಿ ಸ್ಟಾರ್‍ಫಿಶ್ ದರ್ಶನ್ ಅವರನ್ನೇ ಸೆಳೆದುಕೊಳ್ಳಲು ಮುಂದಾಗಿದೆ.

ಸದ್ಯಕ್ಕೆ ದರ್ಶನ್ ರಾಜಕೀಯ ಪ್ರವೇಶಕ್ಕೆ ಒಪ್ಪಿಗೆ ಕೊಟ್ಟಿಲ್ಲ. ಅಕಸ್ಮಾತ್ ಬಂದರೂ, ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಕೇವಲ ಪ್ರಚಾರ ಮಾಡುತ್ತಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು. ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಮೈಸೂರು ಭಾಗದಲ್ಲಿ ದರ್ಶನ್ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವುದೇ ಇದಕ್ಕೆ ಕಾರಣ.

ದರ್ಶನ್ ರಾಜಕೀಯಕ್ಕೆ  ಬರುವುದಿಲ್ಲ ಎಂದು ಹೇಳಿಲ್ಲ. ಬರುತ್ತೇನೆ ಎಂತಲೂ ಹೇಳಿಲ್ಲ. ದರ್ಶನ್ ಈ ಕುರಿತು ಕೆಲವೇ ದಿನಗಳಲ್ಲಿ ಸ್ಪಷ್ಟ ನಿರ್ದಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery