ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‍ನ ಮುಗುಳುನಗೆ ಚಿತ್ರ ಇದೇ ಶುಕ್ರವಾರ ತೆರೆಗೆ ಬರ್ತಾ ಇದೆ. ಇಬ್ಬರೂ ಮೊದಲು ಜೋಡಿಯಾಗಿದ್ದು ಮುಂಗಾರುಮಳೆಯಲ್ಲಿ. ಅದು ಕನ್ನಡದಲ್ಲಿ ದಾಖಲೆಯನ್ನೇ ಬರೆಯಿತು. ಎರಡನೇ ಚಿತ್ರ ಗಾಳಿಪಟ ಕೂಡಾ ಸೂಪರ್ ಹಿಟ್. ಅದಾದ ಮೇಲೆ ಇಬ್ಬರೂ ಒಟ್ಟಾಗಿರುವ ಚಿತ್ರ ಮುಗುಳುನಗೆ.
ನಾಲ್ವರು ನಾಯಕಿಯರ ಜೊತೆ ನಟಿಸಿರುವ ಗಣೇಶ್‍ಗೆ ಈ ಚಿತ್ರದಲ್ಲಿ ಅಮೂಲ್ಯ ಮಾರ್ಗದರ್ಶನ ನೀಡುತ್ತಾರೆ ಎನ್ನುವ ವಿಚಾರವೇ ಕುತೂಹಲ ಮೂಡಿಸಿದೆ. ಮುಂಗಾರುಮಳೆಯಲ್ಲಿ ನಟಿಸಿದ್ದ ಅನಂತ್ ನಾಗ್, ಅದ್ಭುತ ಹಾಡು ಕೊಟ್ಟಿದ್ದ ಜಯಂತ್ ಕಾಯ್ಕಿಣಿ ಈ ಚಿತ್ರದಲ್ಲೂ ಇದ್ದಾರೆ. ನಟ ಜಗ್ಗೇಶ್ ಪುಟ್ಟದೊಂದು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ರಂಗಾಯಣ ರಘು, ಅಚ್ಯುತ್ ಕುಮಾರ್, ರಾಮರಾಮಾ ರೆ ಧರ್ಮಣ್ಣ, ಚಂದನ್, ಮಂಜುನಾಥ್ ಹೆಗ್ಡೆ, ಸಾಗರ್..ಹೀಗೆ ತಾರಾಬಳಗ ದೊಡ್ಡದಾಗಿಯೇ ಇದೆ.
ಮುಗುಳುನಗೆಯೇ ನೀ ಹೇಳು, ಕೆರೆ ಏರಿ ಮ್ಯಾಲೆ, ರೂಪಸಿ ಸುಮ್ಮನೆ, ಹೊಡಿ ಒಂಭತ್.. ಹಾಡುಗಳು ಜನಪ್ರಿಯವಾಗಿವೆ. ಸಾಹಿತ್ಯವನ್ನು ಅಭಿಮಾನಿಗಳು ಈಗಾಗಲೇ ಗುನುಗತೊಡಗಿದ್ದಾರೆ. ಸೈಯ್ಯದ್ ಸಲಾಂ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ.
Related Articles :-
ಹೆಣ್ಮಕ್ಕಳಿಗಾಗಿ..ಹೆಣ್ಮಕ್ಕಳಿಗೆ ಮಾತ್ರ - ಮುಗುಳುನಗೆ ಸ್ಪೆಷಲ್
ಸಭ್ಯ ತುಂಟ ಪ್ರೇಮಿಗಳ ಮನಸು ಕದ್ದ ಮುಗುಳುನಗೆ ಹಾಡುಗಳು
ನಿಮ್ಮ ನಿಮ್ಮ ಪ್ರೀತಿ ಹುಡುಕಿಕೊಳ್ಳಿ.. ಮುಗುಳುನಗೆಯಲಿ..
ಹಾಡು ರಿಲೀಸ್‍ನಲ್ಲೇ ಮುಗುಳುನಗೆ ಕರ್ನಾಟಕ ಯಾತ್ರೆ