` `ವೈರ' ಸಿನಿಮಾ ನೋಡಿ, ಸ್ಕೂಟಿ, ಬೈಕ್ ಗೆಲ್ಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vaira lucky dip scheme
Vaira Movie Image

ರಥಾವರ ಚಿತ್ರ ನಿರ್ಮಾಪಕರ ಹೊಸ ಚಿತ್ರ ವೈರ ಬಿಡುಗಡೆಗೆ ಸಿದ್ಧವಾಗಿದೆ. ಸೆಪ್ಟೆಂಬರ್ 2ನೇ ವಾರ ತೆರೆಗೆ ಬರುತ್ತಿರುವ ಚಿತ್ರಕ್ಕೆ ಹೊಸ ಆಕರ್ಷಣೆ, ಬೈಕ್ ಬಹುಮಾನ.

ಇದು ಚಿತ್ರದ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅವರ ಯೋಜನೆ. ರಥಾವರ ಚಿತ್ರವನ್ನು ನೋಡಿದ್ದು, ಮೆಚ್ಚಿದ್ದು ಯುವಕರು. ಹೀಗಾಗಿ ಯುವಕರಿಗಾಗಿಯೇ ಹೊಸ ಸ್ಕೀಮ್ ರೂಪಿಸೋಣ ಎಂದು ಯೋಜಿಸಿದಾಗ ಹೊಳೆದಿದ್ದು ಈ ಐಡಿಯಾ ಎನ್ನುತ್ತಾರೆ ಮಂಜುನಾಥ್.

ಅದೃಷ್ಟವಂತ 50 ಪ್ರೇಕ್ಷಕರಿಗೆ ಈ ಬಹುಮಾನ ದೊರೆಯಲಿದೆ. ಯುವಕರು ಗೆದ್ದರೆ ಬೈಕ್, ಯುವತಿಯರು ಗೆದ್ದರೆ ಸ್ಕೂಟಿ ನೀಡಲಿದ್ದೇವೆ. ಏನಿಲ್ಲವೆಂದರೂ ಇದಕ್ಕೆ 25 ಲಕ್ಷ ಖರ್ಚಾಗಲಿದೆ. ಸಿನಿಮಾ ನೋಡಿದವರು ಚಿತ್ರಮಂದಿರದಲ್ಲೇ ಇರುವ ಡಬ್ಬಕ್ಕೆ ತಮ್ಮ ಟಿಕೆಟ್‍ನ ಅರ್ಧಭಾಗವನ್ನು ಹಾಕಬೇಕು. ಹೆಸರು, ಫೋನ್ ನಂಬರ್ ಇರಬೇಕು. ವಾರದ ಕೊನೆಗೆ ಲಕ್ಕಿ ಡಿಪ್ ಎತ್ತಲಾಗುತ್ತೆ. ಹಾಗೆ ಆಯ್ಕೆಯಾದವರು ಚಿತ್ರತಂಡದವರು ವೈರ ಚಿತ್ರದ ಬಗ್ಗೆ ಕೇಳುವ 7 ಪ್ರಶ್ನೆಗಳಿಗೆ ಉತ್ತರಿಸಬೇಕು. ಸರಿಯಾದ ಉತ್ತರ ನೀಡುವವರಿಗೆ ಬಹುಮಾನ.

ಬೈಕ್ ಅಥವಾ ಸ್ಕೂಟಿ ಬೇಕಾ..? ವೈರ ಚಿತ್ರಕ್ಕೆ ಈಗಲೇ ಟಿಕೆಟ್ ಬುಕ್ ಮಾಡಿಕೊಳ್ಳಿ.

Related Articles :-

G K Reddy Releases The Trailer Of Vaira