` ಅಬ್ಬಾ..! ಪ್ರಾಣಾಪಾಯದಿಂದ ಕೋಮಲ್, ಲೂಸ್‍ಮಾದ ಯೋಗಿ ಬಚಾವ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yogi, komal image
Yogi, Komal Miracle Escape

ಕೆಂಪೇಗೌಡ 2 ಚಿತ್ರದ ಶೂಟಿಂಗ್ ವೇಳೆ ನಟ ಕೋಮಲ್ ಮತ್ತು ಲೂಸ್ ಮಾದ ಯೋಗಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಮಹಾಬಲಿಪುರಂನಲ್ಲಿ ನಡೆಯುತ್ತಿದ್ದ ಚೇಸಿಂಗ್ ದೃಶ್ಯದ ಚಿತ್ರೀಕರಣದ ವೇಳೆ ಈ ದುರಂತ ಸಂಭವಿಸಿದೆ.

ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ, ಇಬ್ಬರ ಬೆನ್ನುಮೂಳೆ ಮುರಿದು ಹೋಗಬೇಕಿತ್ತು. ಆದರೆ, ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ. ಇಬ್ಬರಿಗೂ ಮಹಾಬಲಿಪುರಂದನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಚಿತ್ರದ ನಾಯಕ ಕೋಮಲ್. ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರಿಗೂ ಈ ದೃಶ್ಯದ ಚಿತ್ರೀಕರಣಕ್ಕೆ ಮುನ್ನ 10 ಬಾರಿ ತಾಲೀಮು ನಡೆಸಲಾಗಿತ್ತು. ಇಷ್ಟಿದ್ದರೂ ಶೂಟಿಂಗ್ ವೇಳೆ ಅದೃಷ್ಟ ಕೈಕೊಟ್ಟಿದೆ.

ಕೆಂಪೇಗೌಡ ಚಿತ್ರದ ನಿರ್ಮಾಪಕ ಶಂಕರೇಗೌಡ ಅವರೇ, ಕೆಂಪೇಗೌಡ 2 ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನೂ ಸ್ವತಃ ತಾವೇ ಹೊತ್ತುಕೊಂಡಿದ್ದಾರೆ. ಸದ್ಯಕ್ಕೆ ಇಬ್ಬರೂ ನಟರು ಸೇಫ್.