ಲಕ್ಷ್ಮೀ ನರಸಿಂಹ ಶಾಸ್ತ್ರಿ. ಪೂರ್ತಿ ಹೆಸರು. ಕಾಶೀನಾಥ್ ಚಿತ್ರಗಳ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳಲ್ಲಿ ಶಾಸ್ತ್ರಿ ಕೂಡಾ ಒಬ್ಬರು. ಅವರು ಹಾಡಿದ ಹಾಡುಗಳು ಒಂದೆರಡಲ್ಲ. 3 ಸಾವಿರಕ್ಕೂ ಹೆಚ್ಚು. ಅವರು ಹಾಡಿದ, ಹಿಟ್ ಆದ ಹಾಡುಗಳನ್ನೊಮ್ಮೆ ನೋಡಿ.
ಕೋಲುಮಂಡೆ ಜಂಗಮ ದೇವ - ಜನುಮದ ಜೋಡಿ
ಲಾಲಿ ಸುವ್ವಾಲಿ..ಹಾಡೆಲ್ಲ ಲಾಲಿ - ಜೋಡಿ ಹಕ್ಕಿ
ಲವ್ವು..ಲವ್ವು..ಲವ್ವುಡಾ - ಅಜಗಜಾಂತರ
ಕರುನಾಡೇ.. ಕೈ ಚಾಚಿದೆ ನೋಡೆ - ಮಲ್ಲ
ನೀರ್‍ದೋಸೆ.. ನೀರ್‍ದೋಸೆ.. - ನೀರ್‍ದೋಸೆ
ಮಾವ ನಿನ್ ಬಾಯ್ಗ್ ಮಣ್ಣಾಕ.. - ಲವ್ ಇನ್ ಮಂಡ್ಯ
ಅವನಲ್ಲಿ..ಇವಳಿಲ್ಲಿ.. - ಶ್
ಅಂತಿಂಥ ಗಂಡು ನಾನಲ್ಲ - ಭಂಡ ನನ್ನ ಗಂಡ
ಹೇಳ್ಕೊಳ್ಳಾಕ್ ಒಂದ್ ಊರು - ಎ
ಇವು ಉದಾಹರಣೆಗಳಷ್ಟೇ. ಇಂತಹ 3 ಸಾವಿರಕ್ಕೂ ಹೆಚ್ಚು ಹಾಡು ಹಾಡಿರುವ ಎಲ್.ಎನ್. ಶಾಸ್ತ್ರಿ, ಸಂಗೀತ ನಿರ್ದೇಶನ ನೀಡಿದ ಮೊದಲ ಚಿತ್ರ ಕನಸಲೂ ನೀನೆ..ಮನಸಲೂ ನೀನೆ. ಪ್ರಕಾಶ್ ರೈ, ಅಬ್ಬಾಸ್ ನಟಿಸಿದ್ದ ಆ ಚಿತ್ರ ಸೋತಿತ್ತು. ಆದರೆ, ಹಾಡುಗಳು ಹಿಟ್ ಆಗಿದ್ದವು.
ಅವರು ಸಂಗೀತ ನೀಡಿದ ಇತರೆ ಚಿತ್ರಗಳೆಂದರೆ, ರವಿಮಾಮ, ಆಂಟಿ ಪ್ರೀತ್ಸೆ, ಹಾಲು ಸಕ್ಕರೆ, ನಿನಗೋಸ್ಕರ, ಬಳ್ಳಾರಿ ನಾಗ, ಡೆಡ್ಲಿ-2, ಫ್ಲಾಪ್, ಮೆಲೋಡಿ.. ಕೊನೆ ಕೊನೆಯ ದಿನಗಳಲ್ಲಿ ಕರುಳಿನ ಕ್ಯಾನ್ಸರ್‍ನಿಂದಾಗಿ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ.