` ಕುರುಕ್ಷೇತ್ರ ವಿಶೇಷ - ಅಲ್ಲೇ ಶೂಟಿಂಗ್, ಅಲ್ಲೇ ಜಿಮ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
actor workout during shoot
Kurukshetra Special

ದರ್ಶನ್ ಅಭಿನಯದ ``ಮುನಿರತ್ನ ಕುರುಕ್ಷೇತ್ರ'' ಚಿತ್ರದ ಶೂಟಿಂಗ್ ಶುರುವಾಗಿ ಬಿರುಸಿನಿಂದ ಸಾಗುತ್ತಿದೆ. 15 ದಿನಗಳ ಚಿತ್ರೀಕರಣ ಕಂಪ್ಲೀಟ್ ಆಗಿದೆ. ದಿನಕ್ಕೆ ಕೇವಲ 4ರಿಂದ 5 ದೃಶ್ಯಗಳನ್ನಷ್ಟೇ ಚಿತ್ರೀಕರಿಸಲಾಗುತ್ತಿದೆ. ಕುರುಕ್ಷೇತ್ರ ಚಿತ್ರದ ಸೆಟ್‍ನಲ್ಲಿ 400ಕ್ಕೂ ಹೆಚ್ಚು ಜನರಿದ್ದಾರೆ. ಅವರನ್ನೆಲ್ಲ ನಿಭಾಯಿಸುವುದೇ ಕುರುಕ್ಷೇತ್ರ ಯುದ್ಧ ಗೆದ್ದ ಹಾಗೆ.

ಚಿತ್ರದ ಶೂಟಿಂಗ್ ಶುರುವಾಗಿದ್ದೇ ಹರಿಪ್ರಿಯಾ ಅವರ ದೃಶ್ಯಗಳ ಚಿತ್ರೀಕರಣದಿಂದ. ಈಗ ಚಿತ್ರೀಕರಣಕ್ಕೆ ರವಿಚಂದ್ರನ್ ಸೇರ್ಪಡೆಯಾಗಿದೆ. ರವಿಚಂದ್ರನ್ ಸೇರ್ಪಡೆ ನಂತರ, ಚಿತ್ರೀಕರಣ ಇನ್ನಷ್ಟು ಬಿರುಸು ಪಡೆದುಕೊಳ್ಳಲಿದೆ.

ಸೆಟ್ ಪಕ್ಕದಲ್ಲೇ ಜಿಮ್ ಇದ್ದು, ಕಲಾವಿದರೆಲ್ಲರೂ ಪ್ರತಿದಿನ ಜಿಮ್‍ನಲ್ಲಿ ಬೆವರು ಹರಿಸುತ್ತಿದ್ದಾರೆ. ಅಂದಹಾಗೆ, ದುರ್ಯೋಧನ ದರ್ಶನ್‍ಗೆ ಇನ್ನೂ ಭಾನುಮತಿ ಸಿಕ್ಕಿಲ್ಲ. ಅರ್ಥಾತ್ ನಾಯಕಿ ಸಿಕ್ಕಿಲ್ಲ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery