ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹವಾ ಕರ್ನಾಟಕದ ಗಡಿಯನ್ನೂ ದಾಟಿ ಹೋಗಲಿದೆ. ಕನ್ನಡದಲ್ಲಿ ತಯಾರಾಗುತ್ತಿರುವ ಚಿತ್ರದ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಅವತರಣಿಕೆಯೂ ಬಿಡುಗಡೆಯಾಗಲಿದೆ. ಒಟ್ಟು 5 ಭಾಷೆಗಳಲ್ಲಿ ಕೆಜಿಎಫ್ ತೆರೆ ಕಾಣಲಿದೆ.
ಚಿತ್ರದ ಶೇ.50ರಷ್ಟು ಶೂಟಿಂಗ್ ಮುಗಿದಿದೆ. ಇನ್ನೂ ಚಿತ್ರದ ಮುಂದಿನ ಶೂಟಿಂಗ್ ಪ್ಲಾನ್, ಲಡಾಖ್, ಕೋಲ್ಕೊತ್ತಾ, ಮುಂಬೈಗಳಲ್ಲೆಲ್ಲ ಸಂಚರಿಸಬೇಕಿದೆ.
ಚಿತ್ರದ ತಾರಾಬಳಗಕ್ಕೆ ರಾಜಾಹುಲಿಯ ವಿಲನ್ ವಸಿಷ್ಠ ಸಿಂಹ ಸೇರ್ಪಡೆಗೊಂಡಿದ್ದಾರೆ. ರಾಜಾಹುಲಿ ನಂತರ, ಯಶ್ ಚಿತ್ರದಲ್ಲಿ ವಸಿಷ್ಠ ಸಿಂಹ ನಟಿಸುತ್ತಿರುವುದು ಇದೇ ಮೊದಲು. 4 ವರ್ಷಗಳ ನಂತರ ಹಿಟ್ ಹೀರೋ-ವಿಲನ್ ಜೋಡಿ ಕೆಜಿಎಫ್‍ನಲ್ಲಿ ಮತ್ತೆ ಘರ್ಜಿಸಲಿದೆ. ಅಲ್ಲದೆ 5 ಭಾಷೆಗಳಲ್ಲಿಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ರಮ್ಯಕೃಷ್ಣ, ನಾಸಿರ್ ಕೂಡಾ ಸೇರುವ ನಿರೀಕ್ಷೆಯಿದೆ.
Related Articles :-