ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ, ನಾನು ಬಂದ ಮೇಲೆ ನಂದೇ ಹವಾ.. ಇದು ಯಶ್ ಫೇಮಸ್ ಡೈಲಾಗ್. ಅದು ಕೆಜಿಎಫ್ ಚಿತ್ರದ 2ನೇ ಔಟ್‍ಲುಕ್‍ನಲ್ಲೂ ಋಜುವಾತಾಗಿದೆ.
ಕೆಜಿಎಫ್ ಚಿತ್ರದ 2ನೇ ಔಟ್‍ಲುಕ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಟ್ರೆಂಡ್ ಆಗಿಬಿಟ್ಟಿದೆ. ಚಿತ್ರದ ಪೋಸ್ಟರ್‍ನಲ್ಲಿ ಯಶ್ 70-80ನೇ ದಶಕದ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಗಡ್ಡ, ಉದ್ದನೆಯ ಕೂದಲಿನ ಕಂಪ್ಲೀಟ್ ರಾ ಲುಕ್, ಅಭಿಮಾನಿಗಳಲ್ಲಿ ಕ್ರೇಜ್‍ನ್ನೇ ಸೃಷ್ಟಿಸಿದೆ.
ಚಿತ್ರದ ಕಥೆ ಏನಿರಬಹುದು..? ಎಂಬ ಬಗ್ಗೆ ಪ್ರೇಕ್ಷಕರ ತಲೆಗೆ ಹುಳ ಬಿಡುವುದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಕಾರ್ತಿಕ್ ಗೌಡ ನಿರ್ಮಾಣದ ಕೆಜಿಎಫ್, ಕನ್ನಡದ ದೊಡ್ಡ ಬಜೆಟ್ ಚಿತ್ರವಾಗುತ್ತಿದೆ.
Related Articles :-
First Look of KGF Today Evening
Yash's KGF Shooting Started Today