ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದು ಬರೆದ ಯೋಗರಾಜ್ ಭಟ್ಟರು, ಮುಗುಳುನಗೆ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ. ಮುಗುಳುನಗೆ ಚಿತ್ರದ ಸ್ಪೆಷಲ್ ಶೋವೊಂದನ್ನು ಹೆಣ್ಣು ಮಕ್ಕಳಿಗಾಗಿಯೇ ಆಯೋಜಿಸುವ ಪ್ಲಾನ್ ಮಾಡಿದ್ದಾರೆ.
ಚಿತ್ರದಲ್ಲಿ ನಾಲ್ವರು ಹೆಣ್ಣುಮಕ್ಕಳ ಪಾತ್ರಗಳಿವೆ. ಭಟ್ಟರ ಮೇಲಿರೋ ಕಂಪ್ಲೇಂಟು ಎಂದರೆ, ಅವರ ಚಿತ್ರಗಳಲ್ಲಿ ಪಾತ್ರಗಳಿರುತ್ತವೆ, ಕಥೆಗಳಿರಲ್ಲ ಅನ್ನೋದು. ಅದೆಲ್ಲ ಸೇಡು ತೀರಿಸಿಕೊಳ್ಳುವವರ ಹಾಗೆ, ಈ ಚಿತ್ರದಲ್ಲಿ 5 ಕಥೆ ಹೇಳುತ್ತಾರಂತೆ ಭಟ್ಟರು.
ಅದೇನೇ ಇರಲಿ, ಭಟ್ಟರ ಸ್ಟ್ರಾಂಗ್ ಹೆಣ್ಮಕ್ಕಳ ಪ್ರೀತಿಗೆ ಜಯವಾಗಲಿ.