` ಸಭ್ಯ ತುಂಟ ಪ್ರೇಮಿಗಳ ಮನಸು ಕದ್ದ ಮುಗುಳುನಗೆ ಹಾಡುಗಳು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mugulunage
MuguluNage Image

ಅದೊಂಥರಾ ಹಾಗೆ. ಯೋಗರಾಜ ಭಟ್ಟರು ಮತ್ತು ಜಯಂತ್ ಕಾಯ್ಕಿಣಿ ಸೇರಿದರೆ, ತುಂಟತನ, ಅಮರ ಪ್ರೇಮ, ಪೋಲಿತನ, ಸಜ್ಜನಿಕೆಯ ಪ್ರೇಮ.. ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಬಿಡುತ್ತವೆ. ಮುಗುಳುನಗೆಯಲ್ಲೂ ಅದೇ ಆಗಿದೆ.

ಮುಗುಳುನಗೆಯ ಹಾಡುಗಳು ಆನ್‍ಲೈನ್‍ನಲ್ಲಿ ಸದ್ದಿಲ್ಲದೇ ಸದ್ದು ಮಾಡುತ್ತಿವೆ. ಸಭ್ಯ ಪ್ರೇಮಿಗಳಿಗೆ ನಿರ್ಮಲ ಏಕಾಂತದಲ್ಲಿ ಇಷ್ಟವಾಗುವಂತಹ ಹಾಡುಗಳನ್ನು ಬರೆದ ಭಟ್ಟರು, ಕಾಯ್ಕಿಣಿ ಮೊದಲ ಸವಾಲು ಗೆದ್ದುಬಿಟ್ಟಿದ್ದಾರೆ.

ರೂಪಸಿ ಹಾಡಿನಲ್ಲಿ ಪ್ರಿಯತಮೆಯನ್ನು ಹುಡುಕುವ ಸಾಚಾತನ, ಕೆರೆ ಏರಿ ಮ್ಯಾಲ್ ಹಾಡಿನಲ್ಲಿ ಕನಸಿನಲ್ಲಿ ಯಾರೊಬ್ಬರ ಮೈಮೇಲೂ ಬಟ್ಟೆ ನೋಡಿಲ್ಲ, ಕ್ಷಮಿಸಿ ಎನ್ನುವ ಪೋಲಿತನ... ನೋಡುಗರಿಗೆ ಇಷ್ಟವಾಗುತ್ತಿದೆ. ಹಾಡು ನೋಡಿದವರು, ಕೇಳಿದವರು ಮುಗುಳ್ನಗುತ್ತಲೇ ಎಂಜಾಯ್ ಮಾಡುತ್ತಿದ್ದಾರೆ.

ಬಹುಶಃ, ಮುಗುಳುನಗೆಯ ಮೇಲೊಂದು ಹಾಡು ಬರೆಯುವ ಧೈರ್ಯವನ್ನು ಇದುವರೆಗೆ ಯಾರೂ ಮಾಡಿರಲಿಕ್ಕಿಲ್ಲವೇನೋ..ಅಂಥಾದ್ದೊಂದು ಧೈರ್ಯ ಮಾಡಿ ಗೆದ್ದಿದ್ದಾರೆ ಯೋಗರಾಜ್ ಭಟ್.

ಇನ್ನು ಗಣೇಶ್ ಮತ್ತು ಭಟ್ಟರ ಕಾಂಬಿನೇಷನ್ 10 ವರ್ಷಗಳ ನಂತರ ಬರುತ್ತಿರುವುದೇ ಪ್ರೇಕ್ಷಕರಲ್ಲಿ ಏನೋ ರೋಮಾಂಚನ. ಆ ರೋಮಾಂಚನ ಥಿಯೇಟರಲ್ಲೂ ಸಿಕ್ಕುಬಿಟ್ಟರೆ, ಮತ್ತೊಂದು ಮುಂಗಾರು ಮಳೆ ಗ್ಯಾರಂಟಿ.