ನವದೆಹಲಿಯಲ್ಲಿ ನಾಳೆಯಿಡೀ ವಿಷ್ಣುವರ್ಧನ್ ಸ್ಮರಣೆ. ವಿಷ್ಣುವರ್ಧನ್ ಹೆಸರಲ್ಲಿ ರಾಷ್ಟ್ರೀಯ ಉತ್ಸವಕ್ಕೆ ನವದೆಹಲಿ ಸಜ್ಜಾಗಿದೆ. ಐನೂರಕ್ಕೂ ಹೆಚ್ಚು ಅಭಿಮಾನಿಗಳು, ಕಲಾವಿದರು ಪಾಲ್ಗೊಳ್ಳುತ್ತಿರುವ ರಾಷ್ಟ್ರೀಯ ಉತ್ಸವಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಕೋರಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ದರ್ಶನ್, ನಿಜವಾದ ಕಲಾವಿದನಿಗೆ ಸಾವೇ ಇಲ್ಲ. ವಿಷ್ಣುವರ್ಧನ್ ಹೆಸರಲ್ಲಿ ರಾಷ್ಟ್ರೀಯ ಉತ್ಸವ ಮಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳು. ವಿಷ್ಣುವರ್ಧನ್ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಿದ್ದರು ಅನ್ನೋದು ಎಲ್ಲರಿಗೂ ಗೊತ್ತು. ದೈಹಿಕವಾಗಿ ನಮ್ಮನ್ನಗಲಿದ್ದರೂ, ಅವರಿಗೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದಗಳು. ಒನ್ & ಓನ್ಲಿ ಸಿಂಹ, ಸಾಹಸಸಿಂಹ ಎಂದಿದ್ದಾರೆ ನಟ ದರ್ಶನ್.
ತಾನೂ ಕೂಡಾ ವಿಷ್ಣುವರ್ಧನ್ ಅಭಿಮಾನಿ ಎಂದಿರುವ ದರ್ಶನ್, ಅಭಿಮಾನಿಗಳ ಪ್ರೀತಿಯನ್ನು ಕೊಂಡಾಡಿದ್ದಾರೆ. ನವದೆಹಲಿಯ ಕನ್ನಡಿಗ ಆಡಿಟೋರಿಯಂನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದನ ಹೆಸರಲ್ಲಿ ರಾಷ್ಟ್ರೀಯ ಉತ್ಸವ ನಡೆಯುತ್ತಿದೆ. ವಿಷ್ಣು ಸೇನಾ ಸಮಿತಿ ಆಯೋಜಿಸಿರುವ ಈ ಉತ್ಸವದಲ್ಲಿ ವಿಷ್ಣುವರ್ಧನ್ ಅವರ ಮೇಣದ ಪ್ರತಿಮೆ ಅನಾವರಣಗೊಳ್ಳುತ್ತಿದೆ. ಚಿತ್ರಲೋಕ ವೀರೇಶ್ ಅವರು ವಿಷ್ಣುವರ್ಧನ್ ಅವರ ವಿಶೇಷ ಫೋಟೋ ಎಕ್ಸಿಬಿಷನ್ ಆಯೋಜಸಿದ್ದಾರೆ. ವಿಷ್ಣು ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ.
Related Articles :-