` ಡಯಾಬಿಟೀಸ್ ಡಾಕ್ಟರ್ ಆದ ಪರಿಮಳಾ ಜಗ್ಗೇಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
parimala jaggesh
Parimala Jaggesh Image

ಡಯಾಬಿಟೀಸ್ ಅನ್ನೋದು ಈಗ ಎಲ್ಲರಿಗೂ ಕಾಡುವ ಕಾಯಿಲೆ. ಮಧುಮೇಹಿಗಳು ಮನೆಗೊಬ್ಬರಾದರೂ ಇರುತ್ತಾರೆ. ಅಂತಹ ಮಧುಮೇಹಿಗಳಿಗಾಗಿ ಸಲಹೆ, ಮಾರ್ಗದರ್ಶನ ನೀಡಲು ಹೊಸ ಸಂಸ್ಥೆಯನ್ನೇ ಹುಟ್ಟು ಹಾಕಿದ್ದಾರೆ ಪರಿಮಳಾ ಜಗ್ಗೇಶ್.

Nutri affaire ಎ ಹೆಲ್ತಿ ಚಾಯ್ಸ್ ಅನ್ನೋ ಹೊಸ ಕಂಪೆನಿ ಹುಟ್ಟುಹಾಕಿದ್ದಾರೆ ಪರಿಮಳಾ ಜಗ್ಗೇಶ್. ಮಧುಮೇಹಿಗಳು ಒಮ್ಮೆ ಇನ್ಸುಲಿನ್​ ಚುಚ್ಚಿಸಿಕೊಂಡರೆ, ಬೇರೆ ಮಾರ್ಗದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವೇ ಇಲ್ಲವಾ..? ಇದು ಬಹುತೇಕ ಮಧುಮೇಹಿಗಳಿಗೆ ಕಾಡುವ ಸಮಸ್ಯೆ. ಈ ಸಮಸ್ಯೆಯೂ ಸೇರಿದಂತೆ ಮಧುಮೇಹಿಗಳು ಎಲ್ಲರಂತೆಯೇ ಬದುಕಬಹುದು ಎಂಬುದಕ್ಕೆ ಈ ಸಂಸ್ಥೆ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡಲಿದೆ.

ಎಲ್ಲವನ್ನೂ ಬಿಟ್ಟು ಮಧುಮೇಹಿಗಳಿಗಾಗಿಯೇ ಸಂಸ್ಥೆ ಆರಂಭಿಸೋಕೂ ಕಾರಣವಿದೆ. ಏಕೆಂದರೆ, ಸುಮಾರು 25 ವರ್ಷಗಳಿಂದ ಸ್ವತಃ ಪರಿಮಳ ಜಗ್ಗೇಶ್ ಮಧುಮೇಹದಿಂದ ಬಳಲಿದ್ದವರು. ಇನ್ಸುಲಿನ್ ತೆಗೆದುಕೊಳ್ಳದಿದ್ದರೆ, ಪರಿಹಾರವೇ ಇಲ್ಲ ಎಂಬ ಸ್ಥಿತಿಯಲ್ಲಿದ್ದವರು ಈಗ ಅದರಿಂದ ಹೊರಬಂದು ಆರೋಗ್ಯವಾಗಿದ್ದಾರೆ.

ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದನ್ನು ಹೇಳುತ್ತಲೇ, ತಮ್ಮದೇ ಅನುಭವವನ್ನು ತಜ್ಞರ ಜೊತೆ ನೀಡಲು ಸಂಸ್ಥೆಯನ್ನೇ ಆರಂಭಿಸಿದ್ದಾರೆ ಪರಿಮಳಾ ಜಗ್ಗೇಶ್. ಸಂಜಯ ನಗರದಲ್ಲಿ ಪುಟ್ಟದೊಂದು ಕಚೇರಿಯಲ್ಲಿ ದೊಡ್ಡ ಕನಸಿನೊಂದಿಗೆ ಸಂಸ್ಥೆ ಆರಂಭವಾಗಿದೆ. ಮಧುಮೇಹಿಗಳಿಗೆ ಈ ಸಂಸ್ಥೆ ವರದಾನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery