ಅದೇ ನಗೆ, ಅದೇ ನಡಿಗೆ, ನಕ್ಕರೆ ಈಗಲೂ ನೋಡುವವರ ಕಣ್ಣಲ್ಲೊಂದು ಮೆಚ್ಚುಗೆ ಇದ್ದೇ ಇರುತ್ತೆ. ಇಂಥ ಅನಂತ್‍ನಾಗ್‍ಗೆ 70 ವರ್ಷವಾಯ್ತಾ..? ಎಪ್ಪತ್ತಾಗಿರುವುದು ಹೌದು. ಅಷ್ಟೇ ಅಲ್ಲ, ಚಿತ್ರರಂಗಕ್ಕೆ ಬಂದು 50 ವರ್ಷವಾಗಿದೆ. ಇದೇ ಕಾರಣಕ್ಕೆ ಗಾಯತ್ರಿ ಅನಂತ್‍ನಾಗ್ ಮತ್ತು ಅನಂತ್‍ನಾಗ್ ವಿಶೇಷ ಪೂಜೆ ಮಾಡಿಸಿದ್ದಾರೆ. ಚಿತ್ರರಂಗದ ತಮ್ಮ ಆತ್ಮೀಯರಿಗೆ ಪುಟ್ಟದೊಂದು ಔತಣಕೂಟ ಏರ್ಪಡಿಸಿ ಸಂಭ್ರಮಿಸಿದ್ದಾರೆ.
ಅನಂತ್‍ನಾಗ್ ಚಿತ್ರಗಳ ನಿರ್ದೇಶಕರಾದ ಭಗವಾನ್, ಫಣಿ ರಾಮಚಂದ್ರ, ಕೋಡ್ಲು ರಾಮಕೃಷ್ಣ, ಯೋಗರಾಜ್ ಭಟ್, ಹೇಮಂತ್ ರಾವ್, ಪವನ್ ಒಡೆಯರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಹಾಗೂ ಸಂಬಂಧಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅನಂತ್‍ನಾಗ್‍ಗೆ ಶುಭ ಹಾರೈಸಿದರು.