ಕನ್ನಡ ಚಿತ್ರ ಪ್ರೇಕ್ಷಕರಿಗೆ ಪ್ರಕಾಶ್ ಎಂದರೆ, ಯಾರು ಅಂತಾರೆ. ಬುಲೆಟ್ ಪ್ರಕಾಶ್ ಎಂದರೆ, ಅವರ ಮುಖದ ಮೇಲೊಂದು ಮುಗುಳ್ನಗೆ ಸರಿದು ಹೋಗುತ್ತೆ. ಆ ಕರಿಯಾನಾ.. ಆ ದಡಿಯಾನಾ.. ಅಂಥಾ ಕೇಳ್ತಾರೆ. ಹಾಗಂತ ಅವರೆಲ್ಲ ಪ್ರಕಾಶ್ ಅವರನ್ನು ಬೈತಾರೆ ಅಂತಾನೋ.. ಲೇವಡಿ ಮಾಡ್ತಾರೆ ಅಂತಾನೋ ಅಂದ್ಕೋಬೇಕಿಲ್ಲ. ಅಭಿಮಾನಿಗಳು ಹಾಗೆ ಕರೆಯುತ್ತಲೇ ಬುಲೆಟ್‍ನ್ನು ಪ್ರೀತಿಸ್ತಾರೆ.
ಆದರೆ, ಈ ಪ್ರಕಾಶ್‍ಗೆ ಬುಲೆಟ್ ಪ್ರಕಾಶ್ ಅಂತಾ ನಾಮಕರಣ ಮಾಡಿದ್ಯಾರು..? ಇಂಥಾದ್ದೊಂದು ಬುಲೆಟ್‍ನಂತಾ ಪ್ರಶ್ನೆಗೆ ಉತ್ತರ ಕೊಟ್ಟಿದ್ಧಾರೆ ಬುಲೆಟ್ ಪ್ರಕಾಶ್. ಇವರಿಗೆ ಆ ಹೆಸರು ನಾಮಕರಣ ಮಾಡಿದ್ದು ಕ್ರೇಜಿ ಸ್ಟಾರ್ ರವಿಚಂದ್ರನ್.
ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರದಲ್ಲಿ ಬಾಲಕನಾಗಿದ್ದ ಬುಲೆಟ್ ಪ್ರಕಾಶ್, ನಂತರ ಪ್ರೀತ್ಸು ತಪ್ಪೇನಿಲ್ಲ ಚಿತ್ರದಲ್ಲಿ ನಟಿಸಿದ್ದರು. ಅದು ಅವರ ಅಭಿನಯದ 3ನೇ ಚಿತ್ರ. ಬರೀ ಪ್ರಕಾಶ್ ಅಂದ್ರೆ ಜನ ನೆನಪಿನಲ್ಲಿಟ್ಟುಕೊಳ್ಳಲ್ಲ ಅಂತಾ ಹೇಳಿ ಬುಲೆಟ್ ಪ್ರಕಾಶ್ ಎಂದು ನಾಮಕರಣ ಮಾಡಿದರಂತೆ ರವಿಚಂದ್ರನ್. ಆಗ ಪ್ರಕಾಶ್ ಬಳಿ ಒಂದು ಭರ್ಜರಿ ಬುಲೆಟ್ ಇತ್ತು. ಆದರೆ ಅದೀಗ ಇಲ್ಲ. ಸಾಲ ತೀರಿಸಲಾಗದೆ ಮಾರಿಬಿಟ್ಟರಂತೆ ಪ್ರಕಾಶ್.
ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಮೊದಲ ಗುರು, ದೇವರು ಅಂದ್ರೆ ಅದು ರವಿಚಂದ್ರನ್ ಎನ್ನುತ್ತಾರೆ ಬುಲೆಟ್ ಪ್ರಕಾಶ್.