` `ರಾಜರಥ' ಏರಿದ ಶ್ರುತಿ ಹರಿಹರನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sruthi hariharn in rajaratha
Sruthi HariHaran Image

ಶ್ರುತಿ ಹರಿಹರನ್ ಕನ್ನಡದಲ್ಲೀಗ ತುಂಬಾ ಬ್ಯುಸಿಯಾಗಿರುವ ನಟಿ. ಅದರಲ್ಲೂ ರಾಜ್ಯ ಪ್ರಶಸ್ತಿ ಬಂದ ಮೇಲೆ ಶ್ರುತಿ ಅವರ ಡಿಮ್ಯಾಂಡ್ ಇನ್ನಷ್ಟು ಹೆಚ್ಚಿದೆ. ಈಗ ನಿರೂಪ್ ಭಂಡಾರಿ ನಾಯಕತ್ವದ ರಾಜರಥ ಚಿತ್ರದಲ್ಲಿ ಶ್ರುತಿ ಹರಿಹರನ್ ಕೂಡಾ ಸೇರಿಕೊಂಡಿದ್ದಾರೆ. ರಂಗಿತರಂಗ ಖ್ಯಾತಿಯ ಭಂಡಾರಿ ಬ್ರದರ್ಸ್ ಚಿತ್ರದಲ್ಲಿ ಶ್ರುತಿ ಅವರ ಪಾತ್ರ ಏನು ಅನ್ನೋದು ಸದ್ಯಕೆಕ ಸೀಕ್ರೆಟ್ ಆಗಿಯೇ ಇದೆ.

ಇತ್ತೀಚೆಗಷ್ಟೇ ತಮಿಳಿನ ಆರ್ಯ ಚಿತ್ರದಲ್ಲಿ ನಟಿಸಿ, ಸುದ್ದಿಯಾಗಿದ್ದರು. ಚಿತ್ರವನ್ನು ತೆಲುಗು, ತಮಿಳಿಗೂ ಕೊಂಡೊಯ್ಯುವ ಸಾಹಸ ಮಾಡುತ್ತಿರುವ ಭಂಡಾರಿ ಬ್ರದರ್ಸ್, ರಾಜರಥದಲ್ಲಿ ಯಾವ ರೀತಿಯ ಕಥೆ ಹೇಳಬಹುದು ಎಂಬ ಕುತೂಹಲವಂತೂ ಇದ್ದೇ ಇದೆ.

ಚಿತ್ರದಲ್ಲಿ ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ರವಿಶಂಕರ್ ನಟಿಸುತ್ತಿದ್ದಾರೆ. ಅಜಯ್ ರೆಡ್ಡಿ, ಅಂಜು ವಲ್ಲಭ್, ವಿಷ್ಣು ಡಾಕಪ್ಪಗಿರಿ, ಸತೀಶ್ ಶಾಸ್ತ್ರಿ ಚಿತ್ರದ ನಿರ್ಮಾಪಕರು.. ನಿರ್ದೇಶನ ಅನೂಪ್ ಭಂಡಾರಿ ಅವರದ್ದು.

Related Articles :-

Kollywood Actor Arya Acts In Rajaratha

Rajaratha Teaser Released On Nirup's Birthday

Rajaratha Launched

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery