ಮಾಗಡಿ ತಾಲೂಕಿನ ಸೋಲೂರು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ, ನಟ ಸಾವಿಗೀಡಾಗಿದ್ದಾರೆ. ಮಹಾನದಿ ಸೀರಿಯಲ್ ಖ್ಯಾತಿಯ ರಚನಾ ಹಾಗೂ ಸಹನಟ ಜೀವನ್ ಮೃತಪಟ್ಟಿದ್ದಾರೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದರು. ಗೆಳೆಯ ಕಾರ್ತಿಕ್ ಹುಟ್ಟುಹಬ್ಬವೂ ಜೊತೆಯಲ್ಲೇ ಬಂದಿದ್ದರಿಂದ ಹುಟ್ಟುಹಬ್ಬವನ್ನೂ ಆಚರಿಸಿಕೊಂಡು ಹಿಂದಿರುಗುತ್ತಿದ್ದರು. ಸಫಾರಿಯಲ್ಲಿ ಬರುತ್ತಿದ್ದವರು ನಿಂತಿದ್ದ ಟ್ಯಾಂಕರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಕಾರ್‍ನಲ್ಲಿದ್ದ ಇತರೆ ಗೆಳೆಯರಾದ ರಂಜಿತ್, ಎರಿಕ್, ಉತ್ತಮ್, ಹೊನ್ನೇಶ್, ಕಾರ್ತಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಟಿ ರಚನಾ, ಮಹಾನದಿ, ತ್ರಿವೇಣಿ ಸಂಗಮ, ಮಧುಬಾಲಾ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಮಹಾನದಿ ಸೀರಿಯಲ್ ರಚನಾಗೆ ಖ್ಯಾತಿ ತಂದುಕೊಟ್ಟಿತ್ತು.