ನಟ ವಿನಯ್ ರಾಜಕುಮಾರ್ ಎರಡು ಹೊಸ ಸಿನಿಮಾಗಳಿಗೆ ಸಿದ್ಧರಾಗುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಒಂದು ‘ಅಚ್ಚರಿ’ ಇನ್ನೊಂದು ‘ಅನಂತು V/S ನುಸ್ರತ್. ಈ ಎರಡರಲ್ಲಿ ಅನಂತು V/S ನುಸ್ರತ್ ಚಿತ್ರಕ್ಕೆ ವರಮಹಾಲಕ್ಷ್ಮೀ ಹಬ್ಬದಂದು ಪೂಜೆ ನಡೆದಿತ್ತು. ಆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ವಿನಯ್ ರಾಜ್ಕುಮಾರ್ ಲಾಯರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಲಾಯರ್ ಆಫೀಸ್ನಲ್ಲಿ, ಅದಕ್ಕೇ ಸಂಬಂಧಿಸಿದ ಪುಸ್ತಕಗಳ ಮಧ್ಯೆ ಸ್ಟೈಲಿಶ್ ಆಗಿ ನಿಂತಿರುವ ವಿನಯ್ ರಾಜ್ಕುಮಾರ್ ಗೆಟಪ್ ಕುತೂಹಲ ಹುಟ್ಟಿಸಿದೆ.ವಿನಯ್, ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಒಂದು ಸುದ್ದಿ ಮೂಲದ ಮಾಹಿತಿ. ಸುಧೀರ್ ಶಾನುಭೋಗ್ ನಿರ್ದೇಶನದ ಚಿತ್ರ, ಮಾಣಿಕ್ಯ ಪ್ರೊಡಕ್ಷನ್ಸ್ನಲ್ಲಿ ಸಿದ್ಧವಾಗುತ್ತಿದೆ. ನಾಯಕಿ ಯಾರು ಎನ್ನುವುದು ಇನ್ನೂ ಫೈನಲ್ ಆಗಿಲ್ಲ