Print 
jayanna, saheba manoranjan

User Rating: 5 / 5

Star activeStar activeStar activeStar activeStar active
 
jayanna distributes saheba
Jayanna Image

ಸಾಹೇಬ, ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟಿಸಿರುವ ಚಿತ್ರ. ಕ್ರೇಜಿಪುತ್ರನ ಮೊದಲ ಚಿತ್ರ ನಿರ್ಮಿಸುವ ಅವಕಾಶ ಪಡೆದ ಜಯಣ್ಣ, ಈ ಚಿತ್ರದಿಂದ ತಾವು ಹಲವು ಕಾಲದಿಂದ ಪಾಲಿಸಿಕೊಂಡು ಸಂಪ್ರದಾಯವನ್ನೇ ಮುರಿದಿದ್ದಾರಂತೆ.

ಸಾಮಾನ್ಯವಾಗಿ ಜಯಣ್ಣ ತಾವು ನಿರ್ಮಿಸಿದ ಚಿತ್ರಗಳನ್ನು ನೋಡುವುದೇ ಇಲ್ಲವಂತೆ. ನಿರ್ದೇಶಕರ ಮೇಲೆ ನಂಬಿಕೆಯಿಟ್ಟರೆ ಮುಗಿಯಿತು. ಇಡೀ ಕಥೆಯನ್ನು ಕೇಳುವುದಿಲ್ಲ. ಬಿಟ್ಸ್‍ಗಳನ್ನು ಮಾತ್ರವೇ ಕೇಳುತ್ತಾರೆ. ಆದರೆ, ಆ ಸಂಪ್ರದಾಯವೆಲ್ಲವೂ ಸಾಹೇಬ ಚಿತ್ರದಲ್ಲಿ ಬ್ರೇಕ್ ಆಗಿದೆ.

ಸಾಹೇಬ ಚಿತ್ರವನ್ನು ಈಗಾಗಲೇ ಮೂರು ಬಾರಿ ನೋಡಿದ್ದಾರಂತೆ ಜಯಣ್ಣ. ಒಮ್ಮೆ ಚಿತ್ರತಂಡದ ಜೊತೆ, ಮತ್ತೆರಡು ಬಾರಿ ಗೆಳೆಯರಿಗೆ ವಿಶೇಷ ಪ್ರದರ್ಶನ ಏರ್ಪಡಿಸಿ, ಅವರೊಂದಿಗೇ ಕುಳಿತು ನೋಡಿ ಖುಷಿಪಟ್ಟಿದ್ದಾರೆ ಜಯಣ್ಣ. ಮುಂದೆ, ಚಿತ್ರವನ್ನು ಮತ್ತೆ ಮತ್ತೆ ನೋಡಿ ಖುಷಿ ಪಡಬೇಕಾದ ಸರದಿ ಕ್ರೇಜಿ ಅಭಿಮಾನಿಗಳದ್ದು.