ರಾಧಿಕಾ ಪಂಡಿತ್ ಮದುವೆಯಾದ ಮೇಲೆ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಮೊದಲಿಗಿಂತ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ತಾರೆ. ಸಿಕ್ಕಾಪಟ್ಟೆ ಟೂರ್ ಮಾಡ್ತಿದ್ದಾರೆ. ಸಿನಿಮಾಗಳಿಂದ 7 ತಿಂಗಳು ಬ್ರೇಕ್ ತೆಗೆದುಕೊಂಡಿದ್ದ ರಾಧಿಕಾ, ಈ ಗ್ಯಾಪ್‍ನಲ್ಲಿ ಏನೇನೋ ಕಲಿತಿದ್ದಾರೆ. ಹಾಗೆ ಕಲಿತ ವಿದ್ಯೆಯ ಪರಿಣಾಮ, ರಾಧಿಕಾ ಈಗ ಮುದ್ದೆ ಸ್ಪೆಷಲಿಸ್ಟ್.
ಮದುವೆಗೆ ಮುಂಚೆ ರಾಧಿಕಾಗೆ ಮಲಗಿದ್ದ ಜಾಗದಲ್ಲೇ ಕಾಫಿ ಬರ್ತಾ ಇತ್ತು. ಅಮ್ಮ ಕೊಡ್ತಾ ಇದ್ರು. ಮದುವೆಯಾದ ಮೇಲೆ ಯಶ್‍ಗೆ ಕಾಫಿ ಕೊಡೋ ಕೆಲಸವನ್ನು ರಾಧಿಕಾನೇ ವಹಿಸಿಕೊಂಡಿದ್ದಾರಂತೆ.. ಪ್ರೀತಿಯಿಂದ. ಅಡುಗೆ ಮಾಡೋಕೆ ಬರ್ತಾ ಇತ್ತು. ಆದರೆ, ರಾಗಿ ಮುದ್ದೆ ಮಾಡೋದು ಕಲಿತಿದ್ದು ಮದುವೆಯಾದ್ಮೇಲೆ ಎಂದು ಹೇಳಿಕೊಂಡಿದ್ದಾರೆ ರಾಧಿಕಾ. ಈಗ ರಾಧಿಕಾ ಮುದ್ದೆ ಮಾಡಿದರೆ, ಗುಂಡು ಗುಂಡಾಗಿ, ಒಂದೇ ಒಂದು ಗಂಟಿಲ್ಲದೆ ಮೃದುವಾಗಿ ಮಾಡ್ತಾರಂತೆ.
ಅಡುಗೆ ಮಾಡೋದು, ಬಡಿಸೋದು ಎರಡೂ ಖುಷಿ ಕೊಡುತ್ತೆ. ಮನೆಯಲ್ಲಿದ್ದಾಗ ಯಶ್, ನಾನು ರಾಜಾಹುಲಿ ಅಂದ್ರೆ, ನಾನು ದುರ್ಗಮ್ಮ ಅಂತೀನಿ ಅಂಥಾ ಹೇಳ್ಕೊಂಡು ನಗ್ತಾರೆ ರಾಧಿಕಾ. ಹುಲಿ ಮೇಲೆ ಸವಾರಿ ಮಾಡೋದು ದುರ್ಗಿ ಅನ್ನೊದನ್ನ ಅಭಿಮಾನಿಗಳಿಗೆ ನೆನಪಿಸಬೇಕಿಲ್ಲ ಅಲ್ವಾ..?