` ಬುಕ್ ಮೈ ಶೋ ರೇಟಿಂಗ್ ನೋಡಿ ಮೋಸ ಹೋಗಬೇಡಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
book my show
Frauds Gives Fake Ratings At BMS

ಹೊಸ ಸಿನಿಮಾ ರಿಲೀಸ್ ಆಗಿದೆ. ಬುಕ್ ಮೈ ಶೋನಲ್ಲಿ  ಟಿಕೆಟ್ ಬುಕ್ ಮಾಡೋಕೆ ಮುಂಚೆ ವೀಕ್ಷಕರ ಅಭಿಪ್ರಾಯ ಹೇಗಿದೆ ಅನ್ನೋದನ್ನ ನೋಡ್ತೀರಿ. ವ್ಹಾವ್ ಅಂತಾ ಉದ್ಘರಿಸ್ತೀರಿ. ಏಕಂದ್ರೆ, ಚಿತ್ರಕ್ಕೆ ಶೇ.80, ಶೇ. 90 ಉತ್ತಮ ಅಂದೆಲ್ಲ ವಿಮರ್ಶೆ ಸರ್ವೆ ಬಂದಿರುತ್ತೆ. ಸಿನಿಮಾಗೆ ಹೋದಾಗ.. ಎಷ್ಟೋ ಬಾರಿ ಭ್ರಮ ನಿರಸನವಾಗುತ್ತೆ. ಈ ಚಿತ್ರಕ್ಕೆ ಅತ್ಯುತ್ತಮ ಎಂದು ರೇಟಿಂಗ್ ಕೊಟ್ಟವರ್ಯಾರು ಎಂದು ಬೈದುಕೊಂಡು ಬರುತ್ತೀರಿ. 

ಆದರೆ, ಮರ್ಮ ಇರೋದು ಇಲ್ಲೇ. ಬುಕ್ ಮೈ ಶೋ, ದೇಶದ ನಂಬರ್ ಒನ್ ಆನ್‍ಲೈನ್ ಟಿಕೆಟ್ ಬುಕಿಂಗ್ ಜಾಲತಾಣ. ಅದರಲ್ಲಿ ಸಿನಿಮಾಗಳಿಗೆ ರೇಟಿಂಗ್ ಕೂಡಾ ಕೊಡಲಾಗುತ್ತೆ. ಆ ರೇಟಿಂಗ್ ಹಿಂದೆ ದೊಡ್ಡ ಡೀಲಿಂಗ್ ನಡೆಯುತ್ತೆ. 

Producers Paying Lakhs for Fake Ratings

ಪ್ರೇಕ್ಷಕರಿಗೆ ಮೋಸ ಮಾಡುವ ಈ ದಂಧೆ ಶುರುವಾಗೋದು ಚಿತ್ರದ ಆನ್‍ಲೈನ್ ಪ್ರಮೋಟರ್‍ಗಳಿಂದ. ತಮ್ಮ ಚಿತ್ರಕ್ಕೆ ಸ್ಟಾರುಗಳೇ ಬೀಳದೆ ಪರದಾಡುವ ನಿರ್ಮಾಪಕರು ಇವರ ಗಾಳಕ್ಕೆ ಸುಲಭವಾಗಿ ಸಿಕ್ಕಿಬೀಳುತ್ತಾರೆ. ಬುಕ್ ಮೈ ಶೋನಲ್ಲಿ ಸ್ಟಾರ್ ಬಿದ್ದು, ರೇಟಿಂಗ್ ಬಂದರೆ, ಪ್ರೇಕ್ಷಕರ ಸಂಖ್ಯೆ ಹೆಚ್ಚಬಹುದು ಎಂಬ ಆಸೆ ನಿರ್ಮಾಪಕರದ್ದು. ಆಗ, ಲಕ್ಷ ಲಕ್ಷ ಹಣ ಕೈ ಬದಲಾಗುತ್ತೆ. ಕೆಟ್ಟ ಚಿತ್ರಕ್ಕೂ ಸುಳ್ಳು ವಿಮರ್ಶೆ ಬರೆದು, ಸ್ಟಾರು ಕೊಡುವವರ ತಂಡವೇ ಇದೇ. 

ಇಂಥಾದ್ದೊಂದು ತಂಡ ಬುಕ್ ಮೈ ಶೋನ ಹೆಸರಿನಲ್ಲಿ ಕೆಲಸ ಮಾಡುತ್ತಿದೆ. ಹಾಗೆಂದು ಚಿತ್ರದ ಪ್ರಚಾರ, ವಿಮರ್ಶೆ ಸ್ಟಾರುಗಳೆಲ್ಲ ಈ ಮಾರ್ಗದಿಂದಲೇ ಸೃಷ್ಟಿಯಾಗುತ್ತೆ ಎಂದರ್ಥವಲ್ಲ. ಚಿತ್ರಗಳನ್ನು ಪ್ರಾಮಾಣಿಕವಾಗಿ ಪ್ರಚಾರ ಮಾಡುವವರು ಚಿತ್ರರಂಗದಲ್ಲಿದ್ದಾರೆ. ಆದರೆ, ಈ `ಪ್ರಾಮಾಣಿಕ ಪಿಆರ್‍ಓ'ಗಳನ್ನು ಹಿಂದಕ್ಕೆ ಸರಿಸಿ ಈ ನಕಲಿ ಪಿಆರ್‍ಓಗಳು ಮೆರೆಯುತ್ತಿರುವುದು ದುರಂತ. ಅಂಥವರ ಜಾಲಕ್ಕೇ ಈ ನಿರ್ಮಾಪಕರು ಕಿಂದರಿ ಜೋಗಿಯ ಹಿಂದೆ ಹೋದ ಮುಗ್ದ ಮಕ್ಕಳಂತೆ ಹೋಗಿ ಬೀಳುವುದು ಮತ್ತೊಂದು ದುರಂತ.

ಈ ಅಡ್ಡದಾರಿಯ ವ್ಯವಹಾರಕ್ಕೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ಫಿಲ್ಮ್ ಚೇಂಬರ್ ಮೇಲಿದೆ.  ನಿರ್ಮಾಪಕರ ಹಿತ ಕಾಯಬೇಕಾದ ಸಂಸ್ಥೆ, ಈ ನಕಲಿ ರೇಟಿಂಗ್ ಸೃಷ್ಟಿಕರ್ತರಿಗೆ ಕಡಿವಾಣ ಹಾಕಬೇಕಿದೆ. ಅದರಿಂದ ಪ್ರೇಕ್ಷಕರು ಮತ್ತು ನಿರ್ಮಾಪಕರನ್ನು ಏಕಕಾಲದಲ್ಲಿ ರಕ್ಷಿಸಲು ಸಾಧ್ಯ. 

ಬುಕ್ ಮೈ ಶೋ ತಂಡ ಇದನ್ನ ಅನೇಕ ಬಾರಿ ತಡೆಯುತ್ತಿದ್ದರು ಅಡ್ಡ ದಾರಿಯಲ್ಲಿ ಬೇರೆ ರೀತಿ ಕಾರ್ಯವಹಿಸುತಿದ್ದಾರೆ ಕೆಲ ಮಂದಿ. ಟಿಕೇಟು ಕೊಂಡವರು ಮಾತ್ರ ವಿಮರ್ಶೆ ಮಾಡುವ ರೀತಿ ಮಾಡಿದರೆ ಮಾತ್ರ ಬುಕ್ ಮೈ ಶೋನ ಗೌರವ ಹೆಚ್ಚುತ್ತದೆ.

Related Articles :-

Producers Paying Lakhs for Fake Ratings