` ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಶುಭ ಕೋರಿದ ಕಿಚ್ಚ  - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep
Sudeep Wishes Vishnuvardhan Rastriya Utsava

ಆಗಸ್ಟ್ 27ರಂದು ನವದೆಹಲಿಯಲ್ಲಿ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯುತ್ತಿದೆ. ದೇಶ ವಿದೇಶಗಳಿಂದ ನೂರಾರು ಅಭಿಮಾನಿಗಳು ಆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಸಿನಿಮಾ, ಜೀವನ, ಕೊಡುಗೆ, ಅದರ್ಶಗಳ ಸ್ಮರಣೆ ನಡೆಯಲಿದೆ. ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಆ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ವಿಶೇಷ. ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅವರ ಮೇಣದ ಪ್ರತಿಮೆಯೂ ಅನಾವರಣಗೊಳ್ಳಲಿದೆ. 

ಈ ಕುರಿತು ಅಭಿಮಾನಿಯೊಬ್ಬರು ಮಾಡಿದ್ದ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್, ವಿಷ್ಣುವರ್ಧನ್ ನಮ್ಮ ಹೆಮ್ಮೆ. ನನ್ನ ಆದರ್ಶ. ವಿಷ್ಣು ರಾಷ್ಟ್ರೀಯ ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

Related Articles :-

ರಾಷ್ಟ್ರ ರಾಜಧಾನಿಯಲ್ಲಿ ವಿಷ್ಣುವರ್ಧನ್

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery