` ನಾನು ಚೆನ್ನಾಗಿದ್ದೇನೆ ಎಂದ ಬ್ರಹ್ಮಾವರ್ - ಮಕ್ಕಳಿಗಾಗಿ ಸತ್ಯ ಮುಚ್ಚಿಟ್ಟರಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sadhashiva bramravar says hes fine and happy
Sadhashiva Bramhavar Image

ನಾನು ಚೆನ್ನಾಗಿದ್ದೇನೆ. ಬೈಲಹೊಂಗಲದಲ್ಲಿದ್ದೇನೆ. ಕುಟುಂಬದವರ ಜೊತೆಯಲ್ಲಿಯೂ ಚೆನ್ನಾಗಿದ್ದೇನೆ. ಯಾವುದೇ ಸಮಸ್ಯೆಯಿಲ್ಲ. ದಯವಿಟ್ಟು ನನಗೀಗ ಯಾವುದೇ ನೆರವು ಬೇಕಿಲ್ಲ. ಇದು ಸದಾಶಿವ ಬ್ರಹ್ಮಾವರ್ ನೀಡಿರುವ ಪ್ರತಿಕ್ರಿಯೆ.

ಕುಮುಟಾದಲ್ಲಿ ಬಸ್ ಚಾರ್ಜಿಗೂ ಕಾಸಿಲ್ಲದೆ ನಿಂತಿದ್ದ ಬ್ರಹ್ಮಾವರ್, ನನ್ನ ಪರ್ಸ್ ಕಳೆದುಹೋಗಿತ್ತು ಅಷ್ಟೆ ಎಂದಿದ್ದಾರೆ. ಆದರೆ, ಸದಾಶಿವ ಬ್ರಹ್ಮಾವರ್ ಮಕ್ಕಳು, ಸೊಸೆಯಂದಿರ ಒತ್ತಡಕ್ಕೆ ಮಣಿದರಾ..? ಎಂಬ ಪ್ರಶ್ನೆಯಂತೂ ಉದ್ಭವವಾಗುತ್ತಿದೆ.

sadhashiva_bramravar_honor.jpgಬ್ರಹ್ಮಾವರ್ ಸ್ವಾಭಿಮಾನಿ. ಯಾರ ಹತ್ತಿರವೂ ಕೈ ಚಾಚಿದವರಲ್ಲ. ಹಾಗೆಂದು ಅವರು ಸಂಕಷ್ಟದಲ್ಲಿದ್ದ ವಿಚಾರ ಗುಟ್ಟಾಗಿಯೇನೂ ಉಳಿದಿರಲಿಲ್ಲ. ಚಿತ್ರಲೋಕ ಸಂಪಾದಕ ವೀರೇಶ್ ಅವರ ಆತ್ಮೀಯ ಮಿತ್ರರೊಬ್ಬರಾದ ವಿಷ್ಣು ಸೇನಾ ಸಮಿತಿಯ ಅದ್ಯಕ್ಷರಾಗಿರುವ ವೀರಪುತ್ರ ಶ್ರೀನಿವಾಸ್ 2015ರಲ್ಲಿ ವಿಷ್ಣು ಅವರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಏರ್ಪಡಿಸಿದ್ದರು. ಆಗ ನಟ ಅನಿರುದ್ದ ಅವರು ಶ್ರೀನಿವಾಸ್ ಅವರಿಗೆ ಯಾರಿಗಾದರು ಕಷ್ಟದಲ್ಲಿರು ಕಲಾವಿದರಿಗೆ ಹಣ ಸಹಾಯ ಮಾಡಿದರೆ ಉತ್ತಮ ಎಂದು ಹೇಳಿ ಬ್ರಹ್ಮಾವರ್ ಅವರ ಹೆಸರನ್ನ ಪ್ರಸ್ತಾಪ ಮಾಡಿದರು. ಇದಕ್ಕೆ ಒಪ್ಪಿಕೊಂಡ ಶ್ರೀನಿವಾಸ್ ಸಮಾರಂಭಕ್ಕೆ ಬ್ರಹ್ಮಾವರ್ ಅವರನ್ನ ಕರೆಸಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ 20 ಸಾವಿರ ನಗದು ಹಣ ನೀಡಿದ್ದರು. ಈಗ, ಸಮಸ್ಯೆಯೇ ಇಲ್ಲ ಎನ್ನುತ್ತಿರುವ ಬ್ರಹ್ಮಾವರ್, ಮಕ್ಕಳ ಮಾನರಕ್ಷಣೆಗೆ ಮುಂದಾಗಿರುವುದಂತೂ ಸ್ಪಷ್ಟ.

ಬ್ರಹ್ಮಾವರ್ ಈಗ ಹೇಳುತ್ತಿರುವುದು ನಿಜವಾಗಿದ್ದರೆ, ಅದು ನಿಜಕ್ಕೂ ಸಂತೋಷದ ವಿಚಾರವೇ. ಆ ಮಕ್ಕಳು ಈ ಹಿಂದೆ ಮಾಡಿದಂತೆಯೇ ಮತ್ತೊಮ್ಮೆ ಮಾಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು..? ಹಾಗಾಗದಿರಲಿ. ಬ್ರಹ್ಮಾವರ್ ಅವರ ಮನೆಯವರೊಂದಿಗೇ ನೆಮ್ಮದಿಯಾಗಿರಲಿ. ಎಲ್ಲರ ಹಾರೈಕೆಯೂ ಅದೇ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery