` ಧ್ವಜಾರೋಹಣ.. ಜನಗಣಮನ.. ಮಾಸ್​ ಲೀಡರ್ ಸಂಭ್ರಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar image
Shivarajkumar hoisting flag

ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ದೇಶಪ್ರೇಮದ ಕಥೆಯನ್ನೇ ಹೊಂದಿರುವ ಚಿತ್ರ ಪ್ರೇಕ್ಷಕರಿಗೂ ಇಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಧ್ವಜಾರೋಹಣ ಮಾಡಿ ಸಂಭ್ರಮ ಆಚರಿಸಿತು. ನೂರು ಆಟೋಗಳೊಂದಿಗೆ ಶಿವರಾಜ್ ಕುಮಾರ್ ಮೆರವಣಿಗೆ ನಡೆಯಿತು. 

ಧ್ವಜಾರೋಹಣ ಮಾಡಿ ಮಾತನಾಡಿದ ಶಿವರಾಜ್ ಕುಮಾರ್, ಪ್ರತಿ ವರ್ಷ ಮನೆಯಲ್ಲಿ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ಬಾರಿ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಹೊರಗೆ ಧ್ವಜಾರೋಹಣ ಮಾಡಿದ್ದೇವೆ ಎಂದರು.

ಆಗಸ್ಟ್ 15 ಶಿವರಾಜ್ ಕುಮಾರ್ ತಮ್ಮ ರಾಘವೇಂದ್ರ ರಾಜ್​ಕುಮಾರ್ ಹುಟ್ಟುಹಬ್ಬವೂ ಹೌದು. ತಮ್ಮನಿಗೆ ನೂರಾರು ವರ್ಷ ಚೆನ್ನಾಗಿ ಬಾಳು ಎಂದು ಶುಭ ಹಾರೈಸಿದರು ಶಿವಣ್ಣ.