ನಟ ಉಪೇಂದ್ರ ರಾಜಕೀಯ ಪ್ರವೇಶ ನಿರ್ಧಾರ ಈಗ ದೇಶಾದ್ಯಂತ ಚರ್ಚೆಯಾಗು್ತಿದೆ. ಹಲವರು ಸ್ವಾಗತಿಸಿದ್ದರೆ, ಇನ್ನೂ ಕೆಲವರು ವಿರೋಧಿಸಿದ್ಧಾರೆ. ‘ಈವರೆಗೆ ಸಮಾಜಕ್ಕೆ ನಿಮ್ಮ ಕೊಡುಗೆ ಏನು’ ಎಂದು ಕೇಳಿರುವವರೂ ಇದ್ದಾರೆ. ಇಂಥಾದ್ದೊಂದು ಐಡಿಯಾ ಬೇಕಿತ್ತು ಎಂದವರೂ ಇದ್ದಾರೆ. ಪರ ವಿರೋಧ ಚರ್ಚೆಯಂತೂ ಜೋರಾಗಿದೆ.
ಇನ್ನೂ ಕೆಲವರು ನಟ ಚೇತನ್ ಅವರ ದಿಡ್ಡಳ್ಳಿ ನಿರಾಶ್ರಿತರ ಪರ ಹೋರಾಟ, ಯಶ್ ಅವರ ಕೆರೆ ಪುನರುಜ್ಜೀವನ ಕಾರ್ಯಕ್ರಮಗಳನ್ನು ಹೋಲಿಸಿ ಪ್ರಶ್ನಿಸಿದ್ದಾರೆ.
ಇವನ್ಯಾರ್ ಗುರು ರಾಜಕೀಯಕ್ಕೆ ಬರುತ್ತಾನಂತೆ ಎಂದು ಶುರುವಾಗುವ ಉಪ್ಪಿ ಬೇಡ ಅಭಿಯಾನದಲ್ಲಿ ನೀವು ಕಷ್ಟದಲ್ಲಿರುವವರಿಗೆ ಕನಿಷ್ಠ 10 ಪೈಸೆ ಕೊಟ್ಟಿಲ್ಲ. ಕನ್ನಡ ಪರ ಹೋರಾಟದಿಂದ ದೂರವೇ ಇದ್ದೀರಿ, ರೈತರ ಕಷ್ಟಗಳಿಗೆ ನೀವು ಸ್ಪಂದಿಸಲೇ ಇಲ್ಲ. ಬಡ ವಿದ್ಯಾರ್ಥಿಗಳಿಗೇನಾದರೂ ಸಹಾಯ ಮಾಡಿದ್ದೀರಾ..? ನೀವೇ ಮಾಡದ ಸಹಾಯವನ್ನು ಜನ ಮಾಡಬೇಕು ಎಂದು ಹೇಗೆ ಕೇಳುತ್ತೀರಿ ಎಂದು ಪ್ರಶ್ನಸಿದ್ದಾರೆ.
ಅದಕ್ಕೆ ಪ್ರತಿಯಾಗಿ ಇನ್ನೂ ಕೆಲವರು ಉಪೇಂದ್ರ ಅವರಲ್ಲಿನ ಪ್ರಾಮಾಣಿಕತೆ ಬಗ್ಗೆ ಪ್ರಶ್ನಿಸಬೇಡಿ. ಎಲ್ಲರ ಕಾಲ್ ಎಳೀತದೆ ಕಾಲ, ನಾವು ನಿಮ್ಮೊಂದಿಗಿದ್ದೇವೆ ಎಂದು ಕೂಡಾ ಟ್ವೀಟ್ ಮಾಡಿದ್ದಾರೆ. ಎರಡೂ ಕಡೆಯ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೆಯುತ್ತಿವೆ.