ಚಿತ್ರರಂಗದಲ್ಲಿ ಉಪೇಂದ್ರ ಒಂದು ರೀತಿ ಎವರ್ಗ್ರೀನ್. ಸಿನಿಮಾ ಹಿಟ್ ಆಗಲಿ, ಫ್ಲಾಪ್ ಆಗಲಿ. ಕೈಲಿ ಸಿನಿಮಾ ಇಲ್ಲದೆ ಕುಳಿತವರೇ ಅಲ್ಲ. ಈಗಲೂ ಅಷ್ಟೆ. ಪ್ರಜಾಕೀಯದ ಮೂಲಕ ರಾಜಕೀಯದ ಘೋಷಣೆ ಮಾಡಿದ್ದರೂ ಕೈಲಿ 3 ಸಿನಿಮಾಗಳಿವೆ.
ಉಪೇಂದ್ರ ಮತ್ತೆ ಹುಟ್ಟಿ ಬಾ, ಉಪ್ಪಿರುಪ್ಪಿ ಮತ್ತು ಹೋಮ್ ಮಿನಿಸ್ಟರ್ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ. ಆದರೆ, ಇದಾದ ನಂತರ ಬೇರೆ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದೇ ಇರಲು ಉಪೇಂದ್ರ ನಿರ್ಧರಿಸಿದ್ದಾರಂತೆ. ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವ ಯೋಚನೆ ಉಪೇಂದ್ರ ಅವರಿಗೆ ಇದ್ದ ಹಾಗಿದೆ.
ರಾಜಕೀಯಕ್ಕಾಗಿ ಉಪೇಂದ್ರ ಕೈಬಿಟ್ಟಿರುವುದು ಸಣ್ಣ ಚಿತ್ರಗಳನ್ನೇನೂ ಅಲ್ಲ. ಚಿರಂಜೀವಿ ಅಭಿನಯದ 151ನೇ ಚಿತ್ರವನ್ನು ಪ್ರಜಾಕೀಯ ಪಕ್ಷಕ್ಕಾಗಿಯೇ ಕೈಬಿಟ್ಟರಂತೆ ಉಪೇಂದ್ರ. ಅಷ್ಟೇ ಅಲ್ಲ, ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದಲ್ಲಿ ನಟಿಸದೇ ಇರಲು ಕೂಡಾ ಇದೇ ಕಾರಣ ಎನ್ನಲಾಗುತ್ತಿದೆ. ಇವುಗಳನ್ನು ಹೊರತುಪಡಿಸಿ ಅವರೇ ನಟಿಸಿ ನಿರ್ದೇಶಿಸಬೇಕಾಗಿದ್ದ ಚಿತ್ರವನ್ನೂ ಉಪೇಂದ್ರ ಸದ್ಯಕ್ಕೆ ಮುಂದೆ ಹಾಕಿದ್ದಾರೆ. ಅಲ್ಲಿಗೆ ಉಪೇಂದ್ರ ಕಂಪ್ಲೀಟ್ ಪೊಲಿಟಿಷಿಯನ್ ಆಗುವ ಕಾಲ ಹತ್ತಿರ ಬಂದಾಗಿದೆ.
Related Articles :-
WELCOME WELCOME ಉಪ್ಪಿ - ಹೆತ್ತವರು, ಸಚಿವರು, ನಾಯಕರಿಂದ ಸ್ವಾಗತ ಮತ್ತು ಬುದ್ದಿಮಾತು
ಮೋದಿ ಓಕೆ, ಆದರೆ ರಾಜ್ಯಕ್ಕೆ ಹೊಸ ಪ್ಲಾನ್ ಬೇಕು - ಖಾಕಿ ತೊಟ್ಟುಬಂದ ಉಪೇಂದ್ರ ಹೇಳಿದ ಹೊಸ ವಿಷಯ ಏನು..?
ಉಪ್ಪಿ ಸಿಎಂ, ಪಿಎಂ ಆಗೋದೇನೂ ಬೇಡ - ಪ್ರಿಯಾಂಕಾ ಉಪೇಂದ್ರ
ಭಾರತಕ್ಕೆ ನರೇಂದ್ರ, ಕರ್ನಾಟಕಕ್ಕೆ ಉಪೇಂದ್ರ - ಅಭಿಮಾನಿಗಳ ಪಾಲಿಗೆ ಇಂದು ಉಪ್ಪಿ ಡೇ
ಬಿಜೆಪಿ ಅಲ್ಲ, ಕಾಂಗ್ರೆಸ್ ಅಲ್ಲ, ಜೆಡಿಎಸ್ ಅಲ್ಲ - ಉಪೇಂದ್ರ ಕಟ್ಟುತ್ತಿರುವುದು ಹೊಸ ಪಕ್ಷ
ನಾನು.. ನನ್ನ ರಾಜಕೀಯ ಕನಸು - ಉಪೇಂದ್ರ ಹೇಳಿಕೊಂಡ ರಾಜಕೀಯ ಕಲ್ಪನೆ ಇದು