ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿ ವರ್ಷವಾಗಿ ಹೋಯ್ತಾ..? ಇದು ಅಭಿಮಾನಿಗಳಿಗೂ ಅಚ್ಚರಿ. ಆ ಅಚ್ಚರಿಯ ಕ್ಷಣವನ್ನು ಶ್ರೀಮತಿ ರಾಧಿಕಾ ನೆನಪಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಪುಳಕಗೊಂಡಿದ್ದಾರೆ.
ಈ ಜೋಡಿ ಮದುವೆಯಾಗಿ 8 ತಿಂಗಳಷ್ಟೇ ಆಗಿರೋದು.ಆದರೆ, ನಿಶ್ಚಿತಾರ್ಥವಾಗಿ ಒಂದು ವರ್ಷವಾಗಿದೆ. ಕಳೆದ ವರ್ಷ ಆಗಸ್ಟ್ 12ರಂದು ಯಶ್ ಮತ್ತು ರಾಧಿಕಾ ಅವರಿಬ್ಬರ ಪ್ರೀತಿಯ ಬಂಧನಕ್ಕೆ ನಿಶ್ಚಿತಾರ್ಥದ ಉಂಗುರದ ಮುದ್ರೆ ಬಿದ್ದಿತ್ತು. ಆ ಸಂಭ್ರಮ ಕ್ಷಣಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ.
ವರ್ಷವಾಯಿತು. ಆ ನಗು, ಆ ಸಂಭ್ರಮ, ಆ ನಸುನಗೆ, ಆ ಹೂವಿನ ಪರಿಮಳ, ಕೇಕ್‌ನ ಸ್ವಾದ, ಸಂಭ್ರಮದ ಪುಳಕ, ತಳಮಳಗೊಂಡ ಕ್ಷಣಗಳನ್ನೂ ಇನ್ನೂ ಮರೆತಿಲ್ಲ ಎಂದಿದ್ದಾರೆ ರಾಧಿಕಾ. ಅವರ ಪ್ರೀತಿ ನೂರ್ಕಾಲ ಬಾಳಲಿ.