ನಿನ್ನೆಯಿಂದ ಇಡೀ ರಾಜ್ಯದಲ್ಲಿ ಉಪೇಂದ್ರ ಅವರದ್ದೇ ಸುದ್ದಿ. ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ. ಹೊಸ ಪಕ್ಷ ಕಟ್ಟುತ್ತಾರೆ ಎನ್ನುವುದು ಊಟ, ‘ಉಪ್ಪಿ’ನಕಾಯಿ ಎಲ್ಲವೂ ಆಗಿತ್ತು. ಅದೆಲ್ಲಕ್ಕೂ ಸುದ್ದಿಗೋಷ್ಟಿಯಲ್ಲಿ ಉತ್ತರ ನೀಡಿದ್ದಾರೆ ಉಪೇಂದ್ರ. ಸುದ್ದಿಗೋಷ್ಟಿಗೆ ಖಾಕಿ ದಿರಿಸಿನಲ್ಲಿ ಬಂದ ಉಪೇಂದ್ರ, ಖಾಕಿ ಕಾರ್ಮಿಕರ ಸಂಕೇತ. ನಾನು ಕಾರ್ಮಿಕನಾಗಲು ಬಯಸುತ್ತೇನೆ ಎಂದರು. ಉಳಿದಂತೆ ನಿನ್ನೆ ಫೇಸ್ಬುಕ್ನಲ್ಲಿ ಬಿಟ್ಟಿದ್ದ ಆಡಿಯೋದಲ್ಲಿ ಹೇಳಿದ್ದ ವಿಚಾರಗಳ ಬಗ್ಗೆಯೇ ಮಾತನಾಡಿದರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಸಂಬಳ ತೆಗೆದುಕೊಂಡು, ಸಂಬಳಕ್ಕಾಗಿ ದುಡಿಯುತ್ತೇನೆ. ಲಂಚಕ್ಕಾಗಿ ದುಡಿಯುವುದಿಲ್ಲ ಎಂದರು.
MAIL ಐಡಿ ಕೊಟ್ಟರು ಉಪೇಂದ್ರ
This email address is being protected from spambots. You need JavaScript enabled to view it., This email address is being protected from spambots. You need JavaScript enabled to view it.,This email address is being protected from spambots. You need JavaScript enabled to view it. - ಈ ಮೂರು ಐಡಿಗಳನ್ನು ಕೊಟ್ಟಿರುವ ಉಪೇಂದ್ರ, ಈ ಮೇಯ್ಲ್ ಐಡಿಗಳಿಗೆ ಜನ ತಮ್ಮ ಐಡಿಯಾಗಳನ್ನು ಕಳುಹಿಸುವಂತೆ ಕೋರಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕವೇ ಹೊಸ ಪಕ್ಷ ಕಟ್ಟುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಮೋದಿ ಓಕೆ.. ಆದರೆ..
ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ, ರಾಜ್ಯ ರಾಜಕೀಯಕ್ಕೆ ಹೊಸ ಯೋಜನೆಗಳು, ಹೊಸ ಚಿಂತನೆಗಳು ಬೇಕು. ಪ್ರತ್ಯೇಕವಾಗಿ ಈ ಬಗ್ಗೆ ಚರ್ಚೆಯಾಗಬೇಕು. ನಾಡು, ನುಡಿ, ನೆಲ, ಜಲ ಮತ್ತು ಅಭಿವೃದ್ಧಿ ಕುರಿತಂತೆ ಪ್ರತ್ಯೇಕ ಯೋಜನೆಗಳು ರೂಪುಗೊಳ್ಳಬೇಕು ಎಂದಿದ್ದಾರೆ ಉಪ್ಪಿ. ಅಮಿತ್ ಶಾ ಬೆಂಗಳೂರಿಗೆ ಬರುವ ಬಗ್ಗೆ ಓದಿದ್ದೇನೆಯೇ ಹೊರತು, ಮಿಕ್ಕೇನು ಗೊತ್ತಿಲ್ಲ ಎಂದಿದ್ದಾರೆ.
ಪ್ರಜಾಕೀಯ.. ಪ್ರಜಾಕಾರಣ
ಅಂಹಾಗೆ ಇದು ಉಪೇಂದ್ರ ಕಟ್ಟುತ್ತಿರುವ ಹೊಸ ಪಕ್ಷದ ಹೆಸರು