` ಉಪೇಂದ್ರ ರಾಜಕೀಯ ಪ್ರವೇಶ ನನಗೂ ಸರ್​ಪ್ರೈಸ್ - ಪ್ರಿಯಾಂಕಾ ಉಪೇಂದ್ರ ಫಸ್ಟ್ ರಿಯಾಕ್ಷನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
priyanka upendra's first reaction
Priyanka, Upendra Image

ಉಪೇಂದ್ರ ಅವರಿಗೆ ರಾಜಕೀಯದ ಬಗ್ಗೆ ಐಡಿಯಾಗಳಿದ್ದವು. ಒಳ್ಳೆಯ ಧ್ಯೇಯಗಳೂ ಇದ್ದವು. ಅವುಗಳ ಬಗ್ಗೆ ಮನೆಯಲ್ಲಿ ನನ್ನ ಜೊತೆ ಚರ್ಚೆಯನ್ನೂ ಮಾಡುತ್ತಿದ್ದರು. ಆದರೆ, ರಾಜಕೀಯ ಪ್ರವೇಶಿಸುವ ಸುದ್ದಿ ನನಗೂ ಸರ್​ಪ್ರೈಸ್. ಆ ಸುದ್ದಿ ನನಗೂ ಗೊತ್ತಿರಲಿಲ್ಲ.

ಇದು ಉಪೇಂದ್ರ ರಾಜಕೀಯ ಪ್ರವೇಶದ ಬಗ್ಗೆ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊದಲ ಪ್ರತಿಕ್ರಿಯೆ. ಉಳಿದಂತೆ ನನಗೂ ಉಪೇಂದ್ರ ಅವರ ರಾಜಕೀಯ ಪಕ್ಷದ ರೂಪುರೇಷೆ ಗೊತ್ತಿಲ್ಲ. ಸಾಮಾಜಿಕ ಜಾಲತಾಣಗಳನ್ನೇ ಬಳಸಿಕೊಂಡು ಪಕ್ಷ ಕಟ್ಟುವ ಉತ್ಸಾಹದಲ್ಲಿದ್ದಾರೆ. ಎಲ್ಲರನ್ನೂ ಒಳಗೊಂಡು, ಸಂಪೂರ್ಣ ಪಾರದರ್ಶಕವಾಗಿ ರಾಜಕೀಯ ಪಕ್ಷ ಕಟ್ಟಲಿದ್ದಾರೆ ಎಂದಿದ್ದಾರೆ ಪ್ರಿಯಾಂಕಾ. 

ಪ್ರಿಯಾಂಕಾ ಅವರ ಮಾತನ್ನೇ ವಿಶ್ಲೇಷಿಸುವುದಾದರೆ, ಉಪೇಂದ್ರ ಯಾವುದೇ ಪಕ್ಷಕ್ಕೆ ಸೇರುತ್ತಿಲ್ಲ. ಬದಲಿಗೆ ಹೊಸ ಪಕ್ಷವನ್ನೇ ಕಟ್ಟುತ್ತಿದ್ದಾರೆ. ಆ ಪಕ್ಷ ಆಗಸ್ಟ್ 15ರಂದು ಉದ್ಘಾಟನೆಯಾಗುವ ಸಾಧ್ಯತೆಗಳಿವೆ. ಏಕೆಂದರೆ ಈ ಬಾರಿಯ ಆಗಸ್ಟ್ 15ರ ಸ್ರಾತಂತ್ರ್ಯೋತ್ಸವ, 70ನೇ ಸ್ವಾತಂತ್ರ್ಯೋತ್ಸವ. 

ಹೀಗೆ ತನಗೇ ಸರ್​ಪ್ರೈಸ್ ಕೊಟ್ಟಿದ್ದರೂ, ಉಪೇಂದ್ರ ಅವರ ಕನಸಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಪ್ರಿಯಾಂಕಾ. ಅವರಿಗೆ ನನ್ನ ಮತ್ತು ಕುಟುಂಬದ ಸಂಪೂರ್ಣ ಬೆಂಬಲವಿದೆ. ಅವರಲ್ಲಿ ಜನಸೇವೆ ಮಾಡಬೇಕು ಎಂಬ ಪ್ರಾಮಾಣಿಕ ಮನಸ್ಸಿದೆ. ಅವರು ಗೆದ್ದೇ ಗೆಲ್ತಾರೆ ಎಂಬ ಭರವಸೆ ಪ್ರಿಯಾಂಕಾ ಉಪೇಂದ್ರ ಮಾತಿನಲ್ಲಿದೆ.

Related Articles :-

ಉಪೇಂದ್ರ ರಾಜಕೀಯ ಪ್ರವೇಶ - ಯಾಱರು ಏನೇನು ಹೇಳಿದ್ರು..?

ರಿಯಲ್ ಪಾಲಿಟಿಕ್ಸ್​ಗೆ REAL STAR..?  ನಾಳೆ ಅಧಿಕೃತವಾಗುತ್ತಾ..?

ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery