` ಅಕ್ಕಾ ಎನ್ನಿಸಿಕೊಂಡಿದ್ದ ರಾಗಿಣಿಯೇ ಶರಣ್​ಗೆ ಜೋಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ragini paired opposite sharan
Ragini, Sharan Image

ವಿಕ್ಟರಿ ಚಿತ್ರದ ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ ಹಾಡು ಕೇಳಿ, ಮೈ ಬಿಸಿಯೇರಿ ಕುಣಿದಿದ್ದ ಅಭಿಮಾನಿಗಳಿಗೆ ಈಗೊಂದು ಖುಷಿ ಖುಷಿ ಸುದ್ದಿ. ಏನೆಂದರೆ, ಆ ಹಾಡಿನಲ್ಲಿ ಶರಣ್ ಜೊತೆ ಕುಣಿದಿದ್ದ ರಾಗಿಣಿ, ಶರಣ್ ಮುಂದಿನ ಚಿತ್ರಕ್ಕೆ ನಾಯಕಿ.

ಮುಕುಂದ ಮುರಾರಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಯೋಗಾನಂದ್ ಮುದ್ದಾನ್, ಶರಣ್​ರ ಹೊಸ ಚಿತ್ರದ ಡೈರೆಕ್ಟರ್. ಶರಣ್ ಜೊತೆ ನಟಿಸಲಿರುವ ಚಿತ್ರಕ್ಕೆ ಈಗಾಗಲೇ ರಾಗಿಣಿ ಹೊಸ ಹೇರ್​ಸ್ಟೈಲ್ ಮಾಡಿಸಿಕೊಂಡಿದ್ದಾರಂತೆ. 

ಅಕ್ಕಾ ನಿನ್ ಮಗ್ಳು ಹಾಡಿನಲ್ಲಿ ದುಂಡ ದುಂಡಗೆ ಇದ್ದ ರಾಗಿಣಿ, ಈಗ ಫುಲ್ ಸ್ಲಿಮ್ ಆಗಿದ್ದಾರೆ. ಶರಣ್ ಚಿತ್ರ ಎಂದ ಮೇಲೆ ಕಾಮಿಡಿಯ ಹೂರಣ, ಒಬ್ಬಟ್ಟು ಇರಲೇಬೇಕು. ಕಾಮಿಡಿಯ ಒಬ್ಬಟ್ಟಿನ ಚಿತ್ರದಲ್ಲಿ ತುಪ್ಪದ ಹುಡುಗಿ ಹೇಗಿರುತ್ತಾರೆ ಅನ್ನೋ ಕುತೂಹಲ ಪ್ರೇಕ್ಷಕರದ್ದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery