` ಅಭಿಮಾನದ ನಟನ ಚಿತ್ರಕ್ಕೆ ಅಭಿಮಾನಿಯೇ ನಿರ್ಮಾಪಕ - ಲೀಡರ್ ಶಿವಪ್ಪ ಕನಸು ನನಸು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
fan became star hero producer
Tarun Shivappa, Shivarajkumar Image

ಪ್ರತಿಯೊಬ್ಬ ಸ್ಟಾರ್ ಕೂಡಾ ಸ್ಟಾರ್ ಆಗೋಕೆ ಮುಂಚೆ ಇನ್ನೊಬ್ಬ ಸ್ಟಾರ್‍ನ ಫ್ಯಾನು ಕಣೋ.. ಇದು ಯಶ್ ಅಭಿನಯದ ಚಿತ್ರವೊಂದರ ಡೈಲಾಗ್. ಅದು ಸತ್ಯವೂ ಹೌದು. ಇದು ಅಂಥಾ ಒಬ್ಬ ಅಭಿಮಾನಿಯ ಕಥೆ. ಈ ಕಥೆಯ ಹೀರೋ ಹೆಸರು ತರುಣ್ ಶಿವಪ್ಪ. ಮಾಸ್ ಲೀಡರ್ ಚಿತ್ರದ ನಿರ್ಮಾಪಕ.

ತರುಣ್ ಶಿವಪ್ಪ ಸುಮಾರು 30 ವರ್ಷಗಳಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿ. ಮುಂದೊಂದು ದಿನ ತಾನು ಶಿವಣ್ಣ ಚಿತ್ರ ನಿರ್ಮಿಸುತ್ತೇನೆ ಎಂದು ಕನಸಿನಲ್ಲೂ ಊಹಿಸಿಕೊಂಡಿರದ ತರುಣ್ ಕನಸು ಈಗ ನನಸಾಗಿಯೇ ಬಿಟ್ಟಿದೆ. 

2013ರಲ್ಲಿ ಶಿವರಾಜ್ ಕುಮಾರ್‍ಗೆ ಚಿತ್ರದ ಒನ್‍ಲೈನ್ ಸ್ಟೋರಿ ಹೇಳಿದ್ದರಂತೆ. ಚಿತ್ರ ಸೆಟ್ಟೇರುವ ಮುನ್ನ ಪ್ರಿ-ಪ್ರೊಡಕ್ಷನ್ ಕೆಲಸಕ್ಕೆ ತುಂಬಾ ಸಮಯ ತೆಗೆದುಕೊಂಡು ಸಿದ್ಧಪಡಿಸಿರುವ ಚಿತ್ರ ಮಾಸ್ ಲೀಡರ್.

ಸುಮಾರು 300 ಥಿಯೇಟರುಗಳಲ್ಲಿ ಚಿತ್ರಮಂದಿರಕ್ಕೆ ದಾಂಗುಡಿಯಿಡುತ್ತಿರುವ ಮಾಸ್ ಲೀಡರ್, ಮಲ್ಟಿ ಸ್ಟಾರ್ ಚಿತ್ರವೂ ಹೌದು. ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಪ್ರಣೀತಾ, ಶರ್ಮಿಳಾ ಮಾಂಡ್ರೆ.. ತಾರಾಗಣ ದೊಡ್ಡದಾಗಿದೆ. 

ವಿಭಿನ್ನ ಕಥಾ ಹಂದರದ ಮಾಸ್ ಲೀಡರ್, ಬಿಡುಗಡೆಗೆ ಮುನ್ನ ಎಬ್ಬಿಸಿರುವ ಹವಾ ಸಣ್ಣದೇನಲ್ಲ.