ಪುನೀತ್ ರಾಜ್‍ಕುಮಾರ್ ಆಂಜನಿಪುತ್ರದ ಶೂಟಿಂಗ್ ಮುಗಿಸಿದ ನಂತರ ರಾಕ್‍ಲೈನ್ ನಿರ್ಮಾಣದ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆ ಚಿತ್ರ ಮುಗಿದ ನಂತರ ಪುನೀತ್ ತಮ್ಮದೇ ಬ್ಯಾನರ್‍ನಲ್ಲಿ ಹೊಸ ಚಿತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ. ನಿರ್ದೇಶಕ ಶಶಾಂಕ್.
ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲೆ, ಬಚ್ಚನ್, ಮುಂಗಾರು ಮಳೆ-2.. ಹೀಗೆ ಡಿಫರೆಂಟ್ ಸಿನಿಮಾಗಳ ಮೂಲಕ ಸ್ಟಾರ್ ಡೈರೆಕ್ಟರ್ ಆಗಿರುವ ಶಶಾಂಕ್‍ಗೆ, ಪುನೀತ್ ಜೊತೆ ಇದು ಮೊದಲ ಚಿತ್ರ.
ಪಿಆರ್‍ಕೆ ಬ್ಯಾನರ್‍ನಲ್ಲಿ ನಿರ್ಮಾಣವಾಗುವ ಈ ಚಿತ್ರ ಜನವರಿಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.
ಪಿಆರ್‍ಕೆ ಬ್ಯಾನರ್‍ನಲ್ಲಿ ಈಗಾಗಲೇ ಬೇರೆಯವರಿಗೆ ಅವಕಾಶ ಕೊಡಲಾಗಿದೆ. ಈ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಕವಲುದಾರಿ. ಆಲಮೇಲಮ್ಮ ಖ್ಯಾತಿಯ ರಿಷಿ ಆ ಚಿತ್ರದ ನಾಯಕ. ಎರಡನೇ ಚಿತ್ರಕ್ಕೆ ಶಶಾಂಕ್ ನಿರ್ದೇಶರಾಗುತ್ತಿದ್ದಾರೆ.
Related Articles :-