ನಾನು ಮತ್ತೊಂದು ಮದುವೆ ಆಗಿಲ್ಲ. ಯಾವುದೇ ನಟಿಯೊಂದಿಗೆ ನನಗೆ ಸಂಬಂಧವಿಲ್ಲ. ಇಂಥಾದ್ದೊಂದು ಸ್ಪಷ್ಟನೆ ಕೊಟ್ಟಿರೋದು ಮಠ, ಎದ್ದೇಳು ಮಂಜುನಾಥ ಖ್ಯಾತಿಯ ಡೈರೆಕ್ಟರ್ ಗುರುಪ್ರಸಾದ್.
ಗುರುಪ್ರಸಾದ್ ಈ ರೀತಿ ಸ್ಪಷ್ಟನೆ ಕೊಡುವುದಕ್ಕೆ ಕಾರಣ, ಅವರ ಬಗ್ಗೆ ಗಾಂಧಿನಗರದಲ್ಲಿ ನಡೆದಿರುವ ಗಾಸಿಪ್‍ಗಳು. ಗುರುಪ್ರಸಾದ್ ಹೆಂಡತಿಯನ್ನು ಬಿಟ್ಟು ಮತ್ತೊಂದು ಮದುವೆಯಾಗಿದ್ದಾರಂತೆ. ಮಗಳನ್ಣೂ ಬಿಟ್ಟಿದ್ದಾರಂತೆ. ಯಾವುದೋ ನಟಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದಾರಂತೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇವುಗಳಿಗೆಲ್ಲ ಗುರು ಸ್ಪಷ್ಟನೆ ಕೊಟ್ಟಿದ್ದಾರೆ.
ಪತ್ನಿಯ ಜೊತೆ ವೈಮನಸ್ಸು ಇರುವುದು ನಿಜ. ಎರಡು ತಿಂಗಳಿಂದ ಬೇರೆ ಇದ್ದೇವೆ. ಹಾಗೆಂದು ಮಗಳಿಂದ ದೂರವಾಗಿಲ್ಲ. ಮಗಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಗುರುಪ್ರಸಾದ್.
ನಟಿಯೊಬ್ಬರ ಜೊತೆ ನನ್ನ ಹೆಸರು ಕೇಳಿಬರುತ್ತಿದೆ. ಅವರು ನನ್ನ ಆಫೀಸ್‍ನಲ್ಲಿಯೇ ಕೆಲಸ ಮಾಡುತ್ತಾರೆ. ನನ್ನಿಂದಾಗಿ ಅವರಿಗೆ ಕೆಟ್ಟ ಹೆಸರು ತರುವುದು ಇಷ್ಟವಿಲ್ಲ. ಎರಡನೇ ಮದುವೆ ಆಗಿಲ್ಲ. ಅಕಸ್ಮಾತ್ ಆದರೆ ಎಲ್ಲರಿಗೂ ಹೇಳಿಯೇ ಆಗುತ್ತೇನೆ ಎಂದಿದ್ಧಾರೆ ಗುರುಪ್ರಸಾದ್.
ಗುರುಪ್ರಸಾದ್ ಎರಡನೇ ಮದುವೆ ಆಗಿದೆ ಎನ್ನುವುದನ್ನು ಒಪ್ಪುತ್ತಿಲ್ಲ. ಆಗುವುದೇ ಇಲ್ಲ ಎಂದೇನೂ ಹೇಳುತ್ತಿಲ್ಲ. ಎರಡನೇ ಸಲ ಏನಾಗುತ್ತೆ..? ಸದ್ಯಕ್ಕಂತೂ ಉತ್ತರವಿಲ್ಲ.